ಕುಂದಗೋಳ : ಗ್ರಾಮೀಣ ಭಾಗದ ಕೃಷಿ ಚಟುವಟಿಕೆಗೆ ಕೂಲಿ ಕಾರ್ಮಿಕರ ಬರ ಎದುರಾದ ಕಾರಣ ರೈತಾಪಿ ಹೊಲಗಳಲ್ಲಿ ಈಗ ಯಂತ್ರೋಪಕರಣಗಳ ಪಾರುಪತ್ಯ ಹೆಚ್ಚಿದ್ದು ಸಮಯ ಉಳಿತಾಯವಾದ್ರು ಡಿಸೇಲ್ ಪೆಟ್ರೋಲ್ ಏರಿಕೆ ಪರಿಣಾಮ ರೈತರಾಗೆ ನಷ್ಟದ ಛಾಯೆ ಎದ್ದು ತೋರುತ್ತಿದೆ.
ಕುಂದಗೋಳ ತಾಲೂಕಿನ ರೈತರ ಮುಂಗಾರು ಹೆಸರು ಬೆಳೆ ಕಟಾವಿಗೆ ಕೂಲಿ ಕಾರ್ಮಿಕರ ಅಲಭ್ಯತೆಯಿಂದ ರೈತರು ಯಂತ್ರದ ಮೋರೆ ಹೋಗಿ ಹೆಸರು ಬೆಳೆ ಕಟಾವು ಮಾಡಿಸುತ್ತಿದ್ದು ಒಂದು ಎಕರೆ ಹೆಸರು ಬೆಳೆಯನ್ನು ಕಟಾವು ಮಾಡಲು ಬರೋಬ್ಬರಿ 2000 ಸಾವಿರ ರೂಪಾಯಿ ದರ ಯಂತ್ರಕ್ಕೆ ನಿಗದಿಯಾಗಿ ರೈತರ ಬೆಳೆದ ಬೆಳೆಯ ಆದಾಯದ ಪಾಲಲ್ಲಿ ಖರ್ಚೇ ಅಧಿಕವಾಗಿದೆ.
ಇನ್ನೂ ಕೂಲಿ ಕಾರ್ಮಿಕರು ದಿನಕ್ಕೆ 250 ರಿಂದ 300 ಕೂಲಿ ಕೇಳುತ್ತಿದ್ದು ಅವರು ಕೇಳಿದಷ್ಟು ಕೂಲಿ ನೀಡಲೂ ರೈತರು ತಯಾರಿದ್ರೂ ಕೃಷಿ ಕೆಲಸಕ್ಕೆ ಕೂಲಿಕಾರ್ಮಿಕರು ಬರುತ್ತಿಲ್ಲ.
ಈ ಪರಿಣಾಮ ರೈತರು ಅನಿವಾರ್ಯವಾಗಿ ಯಂತ್ರದ ಮೊರೆ ಹೋಗಿ ಹೆಸರು ಬೆಳೆ ಕಟಾವು ಮಾಡಿಸುತ್ತಿದ್ದು ಕನಿಷ್ಠ ಏಕರೆಗೆ 15 ರಿಂದ 20 ಪ್ರತಿಶತ ಧಾನ್ಯದ ಜೊತೆ ಸಂಪೂರ್ಣ ಹೊಟ್ಟು ನೆಲದ ಪಾಲಾಗುತ್ತಿದೆ.
ಯಂತ್ರದ ಮಾಲೀಕರು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ ಪರಿಣಾಮ ಕಟಾವಿನ ದರವನ್ನು ಏರಿಸಿದ್ದಾರೆ ಇನ್ನೂ ಹಿಂಗಾರು ಬಿತ್ತನೆಗೆ ಭೂಮಿ ಹರಗುವ, ರಂಟೆ, ಕುಂಟೆ ಹಾಯಿಸುವ ರೈತರಿಗೆ ಡಿಸೇಲ್ ಬೆಲೆ ಹೊರೆಯಾಗಿದ್ದು ಅದೆಷ್ಟೋ ರೈತರು ತಮ್ಮ ಹೊಲ ಲಾವಣಿ ಕೊಟ್ಟು ತುತ್ತಿನ ಕೈ ಚೀಲ ಹಿಡಿದು ನಗರ ಸೇರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಶ್ರೀಧರ ಪೂಜಾರ,
ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
23/09/2021 01:53 pm