ನರಗುಂದ : ಕೃಷಿಯಲ್ಲಿ ಏನಿದೆ ಸ್ವಾಮಿ ಬರಿ ನಷ್ಟ ಎನ್ನುತ್ತಿದ್ದ ರೈತರೀಗ ಕೃಷಿಯಲ್ಲಿ ಎಲ್ಲವೂ ಇದೆ ಅದುವೇ ನಮಗೆ ಇಷ್ಟ ಎನ್ನುವಂತಹ ಸಾಧನೆಯನ್ನು ನರಗುಂದ ತಾಲೂಕಿನ ಸುರಕೋಡ ಗ್ರಾಮದ ರೈತ ಮಾಡಿ ತೋರಿಸಿ ಬಿಎಸ್ಸಿ ಪದವೀಧರನಾದರೂ ಮಣ್ಣನ್ನೇ ನಂಬಿ ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದನೆಯ ಮಾರ್ಗ ತೋರಿದ್ದಾನೆ.
ಅತಿವೃಷ್ಟಿ ಅನಾವೃಷ್ಟಿ ಸುಳಿಯಲ್ಲಿ ತೂಗುಯ್ಯಾಲೆ ಆಗಿದ್ದ, ಕೃಷಿಕರ ಬದುಕಿಗೆ ಇಂತಹದ್ದೊಂದು ಸ್ಥಿರ ಬದಲಾವಣೆ ತಂದಿದ್ದೇ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಯೋಜನೆ. ಈ ಬಿಎಸ್ಸಿ ಪದವೀಧರ ರೈತ ಮಂಜುನಾಥ್ ಸಜ್ಜನರಾವ್ ಕದಂ ಈ ಕೃಷಿ ಹೊಂಡದ ಸಹಾಯದಿಂದಲೇ ಕೃಷಿಯಲ್ಲೇ ಲಕ್ಷ ಲಕ್ಷ ಆದಾಯಕ್ಕೆ ಸೈ ಎಂದಿದ್ದಾರೆ.
ತಮ್ಮ 9 ಎಕರೆ ಜಮೀನಿನನಲ್ಲಿ ಬೆಳೆ ಬೆಳೆಯಲು ನೂರು ನೂರು ಸುತ್ತಳತೆ ಕೃಷಿ ಹೊಂಡ ನಿರ್ಮಿಸಿಕೊಂಡ ಇವರು ಕೃಷಿಹೊಂಡ ಆಧಾರಿತವಾಗಿ ಹೆಸರು, ಕಡಲೆ, ಹತ್ತಿ ವಾಣಿಜ್ಯ ಬೆಳೆ ಬೆಳೆದು 9 ಎಕರೆ ಹೊಲದಲ್ಲಿ 2.50 ಲಕ್ಷ ಆದಾಯ ಗಳಿಸಿದ್ದಾರೆ ಈಗಾಗಲೇ ಮುಂಗಾರು ಹೆಸರು ಬೆಳೆ ಬೆಲೆ ಎರೆಡು ಈಗಾಗಲೇ ಬಂಪರ್ ಆಗಿದ್ದು ಮತ್ತಷ್ಟು ಖುಷಿ ತಂದಿದೆ.
ಇದೇ ಕೃಷಿ ಹೊಂಡ ನಿರ್ಮಾಣಕ್ಕೂ ಮೊದಲು ಲಕ್ಷ ರೂಪಾಯಿ ಆದಾಯ ಕಾಣದ ಇವರ ಕೃಷಿ ಬದುಕಿನಲ್ಲಿ ಕೃಷಿಹೊಂಡ ನಿರ್ಮಾಣದ ಇಚ್ಚೆ ಅಪ್ಪಟ ಸುದಿನಗಳನ್ನು ತಂದಿದ್ದು, ತಮ್ಮೂರಲ್ಲಿನ ಯುವ ರೈತರೀಗ ಈ ಮಂಜುನಾಥ ಕದಂ ಮಾರ್ಗದರ್ಶಿ.
ಮಂಜುನಾಥ ಕದಂರವರ ಕೃಷಿ ಬದುಕಿನ ಗೆಲುವಿನ ಕಥೆಯನ್ನು ಕೇಳಲು ನೀವೂ ಕರೆ ಮಾಡಿ ಮೊಬೈಲ್ ಸಂಖ್ಯೆ 6361571606 ನೀವೂ ಕೃಷಿಹೊಂಡ ನಿರ್ಮಿಸಿ ಕೃಷಿಯಲ್ಲೇ ಖುಷಿ ಕಾಣಿರಿ.
Kshetra Samachara
18/09/2021 07:17 pm