ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : 14 ಎಕರೆ ಎಡೆ ಕುಂಟೆ ಹೊಡಿದು ದಾಖಲೆ ಬರೆದ ತಿರಕಪ್ಪನ ಜೋಡೆತ್ತುಗಳು

ನವಲಗುಂದ : ಸಾಮಾನ್ಯವಾಗಿ ಒಂದು ದಿನಕ್ಕೆ ಎತ್ತುಗಳು ಹೊಲದಲ್ಲಿ ನಾಲ್ಕರಿಂದ ಐದು ಎಕರೆ ಜಮೀನು ಬಿತ್ತನೆ ಮಾಡಬಹುದು. ಆದರೆ ಇಲ್ಲೊಂದು ಜೋಡಿ ಎತ್ತುಗಳು ಒಂದು ದಿನಕ್ಕೆ ಬರೋಬ್ಬರಿ ಹದಿನಾಲ್ಕು ಎಕರೆ ಜಮೀನು ಎಡೆ ಕುಂಟೆ ಹೊಡೆದು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿವೆ.

ಹೌದು ಈ ದಾಖಲೆ ಮಾಡಿದ್ದು, ನವಲಗುಂದ ತಾಲ್ಲೂಕಿನ ತಿರ್ಲಾಪೂರ ಗ್ರಾಮದ ತಿರಕಪ್ಪ ಕುಸುಗಲ್ ಎಂಬ ರೈತನ 5 ವರ್ಷ ವಯಸ್ಸಿನ ಈ ಎರಡು ಎತ್ತುಗಳೇ, ಹೌದು ಮುದಕಪ್ಪ ಹಾಗೂ ಫಕ್ಕಿರಪ್ಪ ಎನ್ನುವವರ ಹತ್ತಿ ಹೊಲದಲ್ಲಿ ಬೆಳಿಗ್ಗೆ 8 ಗಂಟೆಗೆ ಎಡೆ ಕುಂಟೆ ಹೊಡೆಯಲು ಆರಂಭ ಮಾಡಿದ ಎತ್ತುಗಳು ಮಧ್ಯಾಹ್ನ 3:45 ಕ್ಕೆ 14 ಏಕರೆ ಎಡೆ ಕುಂಟೆ ಹೊಡೆದು ಎಲ್ಲರ ಗಮನವನ್ನು ತನ್ನತ್ತ ಸೆಳೆದಿವೆ. ಈ ಸಾಧನೆ ಮಾಡಿದ ಎತ್ತುಗಳನ್ನು ಗ್ರಾಮಸ್ಥರು ಗ್ರಾಮದಲ್ಲಿ ಡೊಳ್ಳು ಕುಣಿತಗಳ ಮೇಳಗಳಿಂದ ಮೆರವಣಿಗೆ ಮಾಡಿದರು.

Edited By : Nagesh Gaonkar
Kshetra Samachara

Kshetra Samachara

14/09/2021 01:40 pm

Cinque Terre

31.47 K

Cinque Terre

1

ಸಂಬಂಧಿತ ಸುದ್ದಿ