ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ನರೇಗಾ ಯೋಜನೆಯಡಿ ಎರೆಹುಳು ಗೊಬ್ಬರ ಘಟಕ ಅಭಿಯಾನ; ಪ್ರತಿ ಗ್ರಾ.ಪಂಚಾಯಿತಿಗು 25 ತೊಟ್ಟಿ ನಿರ್ಮಿಸಲು ಕರೆ

ವರದಿ: ಪ್ರಶಾಂತ್ ಲೋಕಾಪುರ , ಧಾರವಾಡ

ಧಾರವಾಡ :ರೈತರು ಎರೆಹುಳು ಗೊಬ್ಬರ ತಯಾರಿಸುವುದನ್ನು ಉತ್ತೇಜಿಸುವ ದೃಷ್ಟಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಜಿಲ್ಲೆಯಾದ್ಯಂತ ರೈತ ಬಂಧು ಅಭಿಯಾನವನ್ನು ಜಿಲ್ಲಾ ಪಂಚಾಯಿತಿ ಹಮ್ಮಿಕೊಂಡಿದೆ.

ಇದೇ 15ರಿಂದ ಅಕ್ಟೋಬರ್‌ 15ರವರೆಗೆ ಎರಡು ತಿಂಗಳ ಕಾಲ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಅಭಿಯಾನ ನಡೆಯಲಿದ್ದು,ಈ ಅಭಿಯಾನದಲ್ಲಿ ಧಾರವಾಡ ಜಿಲ್ಲೆಯಲ್ಲಿ 3,600 ಹೆಚ್ಚಿನ ಎರೆಹುಳು ತೊಟ್ಟಿ ನಿರ್ಮಾಣ ಗುರಿಯನ್ನು ಜಿಪಂ ಅಧಿಕಾರಿಗಳು ಹೊಂದಿದ್ದಾರೆ.

ಕೃಷಿ ಉತ್ಪನ್ನಗಳಲ್ಲಿ ರಾಸಾಯನಿಕಗಳ ಉಳಿಯುವಿಕೆಯಿಂದ ಉತ್ಪನ್ನಗಳ ಗುಣಮಟ್ಟವೂ ಕಡಿಮೆಯಾಗುತ್ತಿವೆ.ಆ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ರೈತರು ಸಾವಯವ ಕೃಷಿಯತ್ತ ಮುಖ ಮಾಡಿದ್ದು, ಸಾವಯವ ಕೃಷಿಯಲ್ಲಿ ಎರೆಹುಳು ಗೊಬ್ಬರದ ಬಳಕೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.ಈ ಅಭಿಯಾನ ಆರಂಭಿಸಿದೆ.

ಜಿಲ್ಲೆಯಲ್ಲಿ ಈಗಾಗಲೇ ಕೆಲ ತಾಲೂಕುಗಳಲ್ಲಿ ಎರೆಹುಳು ಗೊಬ್ಬರದ ತೊಟ್ಟಿಗಳನ್ನು ನಿರ್ಮಿಸಲಾಗುತ್ತಿದ್ದು,ಪ್ರತಿ ಗ್ರಾಪಂಗೆ 25 ನಿರ್ಮಾಣದ ಗುರಿ ಹೊಂದಿದ್ದು,ಗ್ರಾಮೀಣ ಭಾಗದಲ್ಲಿ ರೈತರಿಗೆ ಎರೆಹುಳು ಗೊಬ್ಬರ ಹೆಚ್ಚು ಅನುಕೂಲಕರವಾಗಿದ್ದು, ಮಣ್ಣಿನ ಫಲವತ್ತತೆ ಹೆಚ್ಚಳಕ್ಕು ಸಹಕಾರಿಯಾಗಿದೆ. ಆ ಹಿನ್ನೆಲೆಯಲ್ಲಿ ಜಿಪಂಯಿಂದ ನಡೆಸುವ ಕಾರ್ಯಕ್ರಮಗಳ ಕುರಿತು ಕ್ರಿಯಾಯೋಜನೆ ರೂಪಿಸಿರುವ ಅಧಿಕಾರಿಗಳು ಮುಂದಿನ ಎರಡು ತಿಂಗಳುಗಳ ಅವಧಿಯಲ್ಲಿ ಜಿಲ್ಲೆಯ 144 ಗ್ರಾ.ಪಂ. ಗಳ ವ್ಯಾಪ್ತಿಯಲ್ಲಿ ಪ್ರತಿ ಗ್ರಾಪಂನಿಂದ 25 ಎರೆಹುಳು ಗೊಬ್ಬರ ತೊಟ್ಟಿಗಳನ್ನು ನಿರ್ಮಿಸಬೇಕು ಎಂದು ಗ್ರಾಪಂಗಳಿಗೆ ಸೂಚಿಸಲಾಗಿದೆ.

ಅಭಿಯಾನದ ಉತ್ತಮ ಸಾಧಕರಿಗೆ ಪ್ರಶಸ್ತಿ:

ರೈತರ ಬಂಧು ಅಭಿಯಾನದಡಿ ಎರೆಹುಳು ಗೊಬ್ಬರ ಘಟಕದ ಅನುಷ್ಠಾನದಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯಿತಿ, ತಾ.ಪಂ. ಹಾಗೂ ಜಿ.ಪಂ. ಗಳನ್ನು ರಾಜ್ಯಮಟ್ಟದಲ್ಲಿ ಗುರುತಿಸಿ ಕನ್ನಡ ರಾಜ್ಯೋತ್ಸವದಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

Edited By : Manjunath H D
Kshetra Samachara

Kshetra Samachara

13/08/2021 09:11 pm

Cinque Terre

20.36 K

Cinque Terre

0

ಸಂಬಂಧಿತ ಸುದ್ದಿ