ನವಲಗುಂದ: ನವಲಗುಂದದಲ್ಲಿ ನಿರ್ಮಲ ಕಂಪನಿಯ ಹೆಸರಿನ ಮೇಲೆ ರೈತರಿಗೆ ಬೀಜ ವಿತರಿಸಿ ವಂಚನೆ ಮಾಡಲಾಗಿದೆ ಎಂದು ಗದಗ ಜಿಲ್ಲೆಯ ಕುರ್ಲಗೇರಿ ಗ್ರಾಮದ ರೈತರು ಆರೋಪಿಸಿ ಕೃಷಿ ಸಹಾಯಕ ನಿರ್ದೇಶಕರಿಗೆ ಸೂಕ್ತ ಕ್ರಮಕ್ಕಾಗಿ ಮನವಿ ನೀಡಿದ್ದಾರೆ.
ಹೌದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದ ರೈತರು ನವಲಗುಂದ ಮಾರುಕಟ್ಟೆಯಲ್ಲಿ ಗಂಗಮ್ಮ ಮಾಡೋಳ್ಳಿ ಎಂಬುವವರ ಬಳಿ ಜೂನ್ ತಿಂಗಳಿನಲ್ಲಿ ಹೆಸರು ಬೀಜ ಖರೀದಿಸಿದ್ದಾರೆ. ಸುಮಾರು 25 ಜನ ರೈತರು 50 ಎಕರೆ ಜಮೀನುಗಳಲ್ಲಿ ಹೆಸರು ಬಿತ್ತನೆ ಮಾಡಿದ್ದು, ಬೆಳೆ ಜಮೀನುಗಳಲ್ಲಿ ಹೆಚ್ಚು ಕಡಿಮೆ 3 ರಿಂದ 4 ಪುಟ್ ಗಳಷ್ಟು ಎತ್ತರ ಬೆಳೆದು ನಿಂತಿದ್ದರೂ ಕೂಡಾ ಗಿಡದಲ್ಲಿ ಹೂ, ಕಾಯಿ ಬಿಡದೇ ಇರುವುದರಿಂದ ಕಳಪೆ ಗುಣಮಟ್ಟದ ಬೀಜ ಎಂದು ತಿಳಿದ ರೈತರು ಆಕೆಯ ಮೇಲೆ ಸೂಕ್ತ ಕ್ರಮಕ್ಕಾಗಿ ಕೃಷಿ ಇಲಾಖೆಯ ಕೃಷಿ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
Kshetra Samachara
03/08/2021 10:25 pm