ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಕೆಳ ಸೇತುವೆ ನಿರ್ಮಾಣ ಮಾಡಿಕೊಡಲು ರೈತರ ಒತ್ತಾಯ

ಹುಬ್ಬಳ್ಳಿ- ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಬೈಪಾಸ್ ಅವೈಜ್ಞಾನಿಕವಾಗಿದ್ದು, ರೈತರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಈಗ ರೈತರು ಬೈಪಾಸ್ ಕಾಮಗಾರಿಯನ್ನ ಸ್ಥಗಿತಗೊಳಿಸಿದ್ದಾರೆ.

ಬಿಡ್ನಾಳ, ಗಬ್ಬೂರ ಸೇರಿದಂತೆ ಹಲವು ರೈತರಿಗೆ ತಮ್ಮ ಜಮೀನಿಗೆ ಹೋಗಲು ಅಂಡರ್ ಪಾಸ್ ಇಲ್ಲದೇ ರಸ್ತೆಯನ್ನ ನಿರ್ಮಾಣ ಮಾಡಲಾಗಿದೆ. ಬೈಪಾಸ್ ನಲ್ಲಿ ವೇಗವಾಗಿ ವಾಹನಗಳು ಬರುತ್ತಿರುತ್ತವೆ, ಅಲ್ಲಿ ಹೋಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ರೈತರು, ತಕ್ಷಣವೇ ಕೆಎನ್ಆರ್ ಸಂಸ್ಥೆ ನಡೆಸುತ್ತಿದ್ದ ಕಾಮಗಾರಿಯನ್ನ ಬಂದ್ ಮಾಡಿಸಿದ್ದಾರೆ.

ರಸ್ತೆ ನಿರ್ಮಾಣದ ಜೊತೆಗೆ ಬೈಪಾಸ್ ಸೇತುವೆ ನಿರ್ಮಾಣ ಮಾಡುವಾಗ ಯಾವುದೇ ವಿಚಾರ ಮಾಡದೇ ನಿರ್ಮಾಣ ಮಾಡಿದ್ದರ ಪರಿಣಾಮ, ರೈತ ಕುಟುಂಬಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲವೆಂದು ರೈತರು ದೂರಿದರು.

ರೈತರ ಬೇಡಿಕೆಗಳಿಗೆ ಸ್ಪಂದನೆ ಮಾಡದೇ ಇದ್ದರೇ ಜಿಲ್ಲಾಧಿಕಾರಿಗಳಿಗೆ ಕಚೇರಿ ಎದುರು ಪ್ರತಿಭಟನೆ ಮಾಡಲು ರೈತರು ಮುಂದಾಗಿದ್ದಾರೆ. ಇಂದಿನ ಹೋರಾಟದಲ್ಲಿ ರೈತ ಸಂಘದ ಪರುಸಪ್ಪ ಬಳಗನವರ, ಕಾಂಗ್ರೆಸ್ ಮುಖಂಡ ಮೋಹನ ಅಸುಂಡಿ, ಫಕ್ಕೀರಪ್ಪ ಕಲ್ಲಣ್ಣನವರ, ಸಿ.ಬಿ.ಅಸುಂಡಿ, ಪ್ರಭು ಅಂಚಟಗೇರಿ ಸೇರಿದಂತೆ ಹಲವರು ಭಾಗವಹಿಸಿದ್ದರು...

Edited By : Manjunath H D
Kshetra Samachara

Kshetra Samachara

30/01/2021 09:10 pm

Cinque Terre

19.75 K

Cinque Terre

0

ಸಂಬಂಧಿತ ಸುದ್ದಿ