ನವಲಗುಂದ: ನವಲಗುಂದ ಪಟ್ಟಣದ ಹೃದಯ ಭಾಗದಲಿರುವ ತರಕಾರಿ ಮಾರುಕಟ್ಟೆಯಿಂದಾಗಿ ಪಟ್ಟಣದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಈ ಮಾರುಕಟ್ಟೆಯನ್ನು ಎಪಿಎಂಸಿ ಗೆ ಸ್ಥಳಾಂತರ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ನವಲಗುಂದ ನಗರ ಘಟಕ ವತಿಯಿಂದ ಪುರಸಭೆ ಮುಖ್ಯಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ನಿಂಗಪ್ಪ ಕೆಳಗೇರಿ, ನಗರ ಸಂಚಾಲಕ ನಿಂಗಪ್ಪ ಜಾಡರ್, ರಮೇಶ್ ಮಲ್ಲದಾಸರ, ರವಿ ಬಿಂಡಿಗೇರಿ, ನಗರ ಸಂಘಟನಾ ಸಂಚಾಲಕರು ಹೂವಪ್ಪ ದೊಡಮನಿ, ಮೈಲಾರಪ್ಪ, ಹುಚ್ಚಪ್ಪ ದೊಡಮನಿ, ಕೃಷ್ಣ ದೊಡಮನಿ, ಹುಚ್ಚಪ್ಪ ಶಿರೋಳ ಸೇರಿದಂತೆ ಮತ್ತಿತರರು ಇದ್ದರು..
Kshetra Samachara
01/01/2021 08:15 pm