ಕುಂದಗೋಳ : ರಾಜ್ಯಾದ್ಯಂತ ರೈತ ಮಸೂದೆ ವಿರೋಧಿಸಿ ಪ್ರತಿಭಟನೆ ಕಾವು ಚುರುಕಾಗಿದ್ದು ಇಡೀ ರಾಜ್ಯವೆ ಬಂದ್ ಗೆ ಒಳಪಟ್ಟಿದೆ.
ಪರಿಸ್ಥಿತಿ ಹೀಗಿರುವಾಗಲೇ ಕುಂದಗೋಳ ತಾಲೂಕಿನ ವಿವಿಧ ಹಳ್ಳಿಯ ರೈತರನ್ನು ಪಬ್ಲಿಕ್ ನೆಕ್ಸ್ಟ್ ಮಾತನಾಡಿಸುವ ಪ್ರಯತ್ನ ಮಾಡಿದ್ದು ರೈತರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಿಜವಾಗಿಯೂ ರೈತ ಮಸೂದೆ ಎಂಬುದೇ ಅವರಿಗಿನ್ನೂ ಸ್ಪಷ್ಟಲಾಗಿ ತಿಳಿದಿಲ್ಲ ಇನ್ನು ಕೆಲವು ರೈತರು ನಮ್ಮ ಹೊಲದಲ್ಲಿ ಕಷ್ಟಪಟ್ಟು ಬೆಳೆದಿರುವ ಬೆಳೆಯನ್ನೇ ನಮಗೆ ತೆಗೆದುಕೊಳ್ಳಲು ಆಗುತ್ತಿಲ್ಲ ಸ್ವಾಮಿ ಎನ್ನುತ್ತಿದ್ದಾರೆ.
ಸಮಯಕ್ಕೆ ಸರಿಯಾಗಿ ಆಳುಗಳು ಸಿಗದೆ ಬೆಳೆದ ಬೆಳೆ ಕೊಳೆಯುತ್ತಿದೆ ಅತಿವೃಷ್ಟಿಯಿಂದ ಹಾಳಾದ ಬೆಳೆಗೆ ಪರಿಹಾರ ಕೊಡಿಸಿ ಸಾಕು ದುಡಿದರೇ ಅನ್ನ ಸಿಗುತ್ತೆ ಪ್ರತಿಭಟನೆ ಬಂದ್ ಯಾಕಾಗಿದೆ ? ಎನ್ನುತ್ತಿದ್ದಾರೆ.
Kshetra Samachara
28/09/2020 12:37 pm