ಕಲಘಟಗಿ:ತಾಲ್ಲೂಕಿನ ಅರಣ್ಯದಂಚಿನ ಗ್ರಾಮಗಳಾದ ಬೈಚವಾಡ ಹಾಗೂ ಡಿಂಬವಳ್ಳಿ ಗ್ರಾಮಗಳ ಹೊಲಗಳಲ್ಲಿ ಆನೆಗಳ ಹಿಂಡು ಬಾನುವಾರ ಪ್ರತ್ಯಕ್ಷವಾಗಿವೆ.
ಐದು ಆನೆಗಳ ಹಿಂಡು ಶನುವಾರ ರಾತ್ರಿಯೇ ಕಲಘಟಗಿ ತಾಲೂಕುಪ್ರವೇಶ ಮಾಡಿದ್ದು,ಕೆಲ ವೆಡೆಗಳಲ್ಲಿ ಭತ್ತದ ಗದ್ದೆಗೆ ನುಗ್ಗಿದ ಪರಿಣಾಮ ರೈತರು ಬೆಳೆದ ಭತ್ತದ ಬೆಳೆ ಹಾನಿಯಾಗಿದೆ.
ಮೊದಲು ಬೈಚವಾಡ ಹತ್ತಿರ ಕಾಣಿಸಿಕೊಂಡ ಆನೆಗಳು ಅಲ್ಲಿಂದ ಮತ್ತೆ ಡಿಂಬವಳ್ಳಿ ಹತ್ತಿರದ ಹೊಲಗಳಲ್ಲಿ ಕಾಣಿಸಿಕೊಂಡಿವೆ.
ಕಳೆದ ವರ್ಷವು ಆನೆಗಳು ಕಲಘಟಗಿ ಪ್ರವೇಶ ಮಾಡಿ ಅರಣ್ಯದಂಚಿನ ಗ್ರಾಮಗಳ ರೈತರ ಹೂಲಗಳಲ್ಲಿ ಬೆಳೆ ಹಾನಿ ಮಾಡಿದ್ದವು,ಈ ಬಾರಿ ಆನೆಗಳು ಮತ್ತೆ ಕಲಘಟಗಿ ಪ್ರವೇಶ ಮಾಡಿರುವುದರಿಂದ ರೈತರು ಬೆಳೆ ನಷ್ಟವಾಗುವ ಆತಂಕದಲ್ಲಿ ಇದ್ದಾರೆ
Kshetra Samachara
20/09/2020 07:16 pm