ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ರೈತರ ಏಳ್ಗೆಗೆ ಕೃಷಿ ಸಂಬಂಧಿತ ಇಲಾಖೆಗಳ ಪ್ರಯೋಜನ ಅಗತ್ಯ

ಕುಂದಗೋಳ : ರೈತ ದಿನಾಚರಣೆ ಪ್ರಯುಕ್ತ ರೈತನಿಗೆ ಗೌರವ ಕೊಡುವುದು ಅಷ್ಟೇ ಅಲ್ಲದೆ ರೈತ ಸಂಪರ್ಕ ಕೇಂದ್ರಗಳು ರೈತರಿಗೆ ಇಲಾಖೆಗಳಿಂದ ಸೌಲಭ್ಯ ತಲುಪಿಸುವುದು ನಮ್ಮ ಜವಾಬ್ದಾರಿ. ಆ ನಿಟ್ಟಿನಲ್ಲಿ ಕೃಷಿ ಸಂಬಂಧಿತ ಇಲಾಖೆ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತೆವೆ ಎಂದು ಕೃಷಿ ನಿರ್ದೇಶಕ ಸದಾಶಿವ ಕಾನೂರಿ ಹೇಳಿದರು.

ಅವರು ರೈತ ದಿನಾಚರಣೆ ಪ್ರಯುಕ್ತ ರೈತ ಸಂಪರ್ಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಕುಂದಗೋಳ ತಾಲೂಕಿನ ರೈತರಿಗೆ ಆಯಾ ಋತುಮಾನಕ್ಕೆ ಅನುಗುಣವಾಗಿ ಸಿಗುವ ಇಲಾಖೆ ಸೌಲಭ್ಯಗಳ ಕುರಿತು ಅವರು ಹೇಳಿದರು.

ಸಹಾಯಕ ಕೃಷಿ ಅಧಿಕಾರಿ ಅಂಬಿಕಾ ಮಹೇಂದ್ರಕರ ಮಾತನಾಡಿ ರೈತ ಸಂಪರ್ಕ ಕೇಂದ್ರಗಳಲ್ಲಿನ ಸೌಲಭ್ಯಗಳು ಬಗ್ಗೆ ತಿಳಿಸಿದರೇ, ವಲಯ ಅರಣ್ಯಾಧಿಕಾರಿಗಳು ಜೂನ್ ಮತ್ತು ಜುಲೈ ತಿಂಗಳಲ್ಲಿ ರೈತರಿಗೆ ಸಸಿಗಳನ್ನು ವಿತರಿಸುವ ಬಗ್ಗೆ ತಿಳಿಸಿದರು, ಪಶು ಆಸ್ಪತ್ರೆ ವೈದ್ಯರು ಮಾತನಾಡಿ ಹಸು ದನ ಕರುಗಳಿಗೆ ಲಿಂಪಸ್ಕೀನ್ ರೋಗದ ಮುನ್ನೆಚ್ಚರಿಕೆ ಕ್ರಮ ಹೇಳಿದರು.

Edited By :
Kshetra Samachara

Kshetra Samachara

24/12/2020 09:13 am

Cinque Terre

42.48 K

Cinque Terre

0

ಸಂಬಂಧಿತ ಸುದ್ದಿ