ಕುಂದಗೋಳ : ಇದೇನಪ್ಪಾ ಈ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಅದ್ಯಾಕೆ ? ನೀರಿನ ಹುಂಡಿಗೆ ಸುರಿಯುತ್ತಿದ್ದಾರೆ. ಎಂದು ಈ ದೃಶ್ಯಗಳನ್ನ ನೋಡಿ ನೀವು ಆಶ್ಚರ್ಯ ಪಡಬಹುದು.
ಆದ್ರೇ ಹೀಗೆ ನೀರು ತುಂಬಿರುವ ಗುಂಡಿಗೆ ಶೇಂಗಾ ಸುರಿಯುತ್ತಿರೋ ರೈತರು, ತಮ್ಮದೆ ಹೊಸ ಆಲೋಚನೆ ಕಂಡು ಕೊಂಡಿದ್ದು, ಈ ವರ್ಷದ ಅತಿವೃಷ್ಟಿ ಪರಿಣಾಮ ಮಣ್ಣು ಮೆತ್ತಿ ಬೆಲೆಯಲ್ಲಿ ಏರಿಕೆ ಕಾಣದ ಶೇಂಗಾ ಬೆಳೆಯನ್ನ ಈ ರೀತಿಯಲ್ಲಿ ಸ್ವಚ್ಚ ಮಾಡಿ ಹೆಚ್ಚಿನ ಬೆಲೆಗೆ ಮಾರಾಟಕ್ಕೆ ಸಜ್ಜಾಗಿದ್ದಾರೆ.
ಹೌದು ! ಕುಂದಗೋಳ ತಾಲೂಕಿನ ಸುಲ್ತಾನಪುರ ಗ್ರಾಮದ ರೈತ ನಾಗಾರಾಜ ಭದ್ರಾಪೂರ ಎಂಬುವವರು ಇಂತಹದೊದ್ದು ಆಲೋಚನೆ ಕಂಡು ಕೊಂಡಿದ್ದು. ಶೇಂಗಾ ಹಾಗೂ ಮಣ್ಣು ಬೇರ್ಪಡಿಸಲು ಕೆಲಸಗಾರರು ಹಾಗೂ ಯಂತ್ರಕ್ಕೆ ಹಣ ಕೊಡುವ ಬದಲಾಗಿ, ನೆಲ ಅಗೆದು ಗುಂಡಿ ತೊಡಿ ಅದರಲ್ಲಿ ನೀರನ್ನು ಶೇಖರಿಸಿ ಹೀಗೆ ಮಣ್ಣು ಮೆತ್ತಿದ ಶೇಂಗಾ ಬೆಳೆಯನ್ನು ನೀರಿಗೆ ಸುರಿದು ಸ್ವಚ್ಚ ಮಾಡಿ ಬಿಸಿಲಿಗೆ ಒಣ ಹಾಕುತ್ತಿದ್ದು, ಸದ್ಯ ಶೇಂಗಾ ಬೆಳೆಗೆ ಉತ್ತಮ ಬೆಲೆ ಪಡೆಯಲು ಮುಂದಾಗಿದ್ದಾರೆ.
ಈಗಾಗಲೇ ಇವರು ಅಳವಡಿಸಿದ ಕ್ರಮ, ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಪೇಮಸ್ ಆಗಿದ್ದು, ತಿಂಗಳು ಗಟ್ಟಲೇ ಆಳು ಕೆಲಸ ನಿರ್ವಹಿಸದರೂ ಬಿಡದ ಮಣ್ಣನ್ನು ಈ ರೈತ ಕೇವಲ ಒಂದು ತಾಸಿನಲ್ಲಿ 2 ಚೀಲ ಮಣ್ಣಿನಿಂದ ಶೇಂಗಾ ಬೇರ್ಪಡಿಸಿ ರೈತರು ಯಂತ್ರದ ಮೋರೆ ಹೋಗುವುದನ್ನು ತಪ್ಪಿಸಿದ್ದಾರೆ.
Kshetra Samachara
24/11/2020 06:08 pm