ಹುಬ್ಬಳ್ಳಿ : ಬೆಳೆ ಸಮೀಕ್ಷೆಯೊಂದರಲ್ಲಿರುವ ಗೊಂದಲ ನಿವಾರಣೆ ಹಾಗೂ ರೈತರಿಗೆ ಬೆರಳು ತುದಿಯಲ್ಲಿಯೇ ಎಲ್ಲ ರೀತಿಯ ಬೆಳೆ ಸಮೀಕ್ಷೆಯ ಮಾಹಿತಿಯೊಂದು ಕೂಲಂಕಷವಾಗಿ ದೊರೆಯಲಿದೆ.ಅಲ್ಲದೇ ಕೃಷಿಯನ್ನು ಮತ್ತಷ್ಟು ಆಧುನೀಕರಣ ಹಾಗೂ ವೈಜ್ಞಾನಿಕ ವಿದ್ಯಮಾನಗಳ ಮೂಲಕ ಮತ್ತಷ್ಟು ಜನಪ್ರಿಯಗೊಳ್ಳಲಿದೆ.ಎನೀದು ಮಾಹಿತಿ ಅಂತೀರಾ ಈ ಸ್ಟೋರಿ ನೋಡಿ...
ಹೌದು..ಬೆಳೆ ಸಮೀಕ್ಷೆ ಸರಿಯಾಗಿ, ಸಮರ್ಪಕವಾಗಿದೆಯೋ ಇಲ್ಲವೋ ಎಂಬುವ ಗೊಂದಲ ಪ್ರತಿಯೊಬ್ಬ ರೈತನಲ್ಲಿಯೂ ಕೂಡ ಇದ್ದೆ ಇರುತ್ತದೆ. ಸಮೀಕ್ಷೆಯಲ್ಲಿ ಲೋಪದೋಷವಾಗಿದ್ದರೆ ಆಕ್ಷೇಪಣೆ ಸಲ್ಲಿಸಲು ಹೀಗೆ ಸಮೀಕ್ಷೆಯ ಪ್ರತಿ ಪ್ರಕ್ರಿಯೆಗಳನ್ನು ಕುಳಿತಲ್ಲೇ ಪರಿಶೀಲಿಸಬಹುದಾಗಿದೆ.
ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅನುಷ್ಠಾನಗೊಂಡಿರುವ ‘ನನ್ನ ಬೆಳೆ ನನ್ನ ಹಕ್ಕು’ ಸಮೀಕ್ಷೆಯ ವಿವರಗಳನ್ನು ವೀಕ್ಷಿಸಲು ‘ಬೆಳೆ ದರ್ಶಕ’ ಆ್ಯಪ್ ಬಿಡುಗಡೆಗೊಳಿಸಿದೆ.
ರೈತರೇ ತಮ್ಮ ಹೊಲದಲ್ಲಿ ನಡೆಸಿದ ಸಮೀಕ್ಷೆ ಸ್ವಲ್ಪ ಹಿನ್ನಡೆಯಾಗಿದ್ದರ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯು ಖಾಸಗಿ ಸಂಪರ್ಕ ವ್ಯಕ್ತಿಗಳು, ತಲಾಠಿಗಳು, ಗ್ರಾಮ ಸಹಾಯಕರು, ಕೃಷಿ ಸಹಾಯಕರನ್ನು ಸಮೀಕ್ಷೆಗೆ ನಿಯೋಜಿಸಿತ್ತು. ಈ ವೇಳೆ ಬೆಳೆ ಸಮೀಕ್ಷೆ ಬಹಳಷ್ಟು ವ್ಯತ್ಯಾಸ ಕಂಡು ಬರಬಹುದು. ಇದರಿಂದ ರೈತರು ಬೆಳೆ ಪರಿಹಾರದಿಂದ ವಂಚಿತರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಮೀಕ್ಷೆ ಪುನರಾವಲೋಕನ ಮಾಡಿಕೊಳ್ಳಲು ಬೆಳೆ ದರ್ಶಕ ಆ್ಯಪ್ ಸಹಕಾರಿಯಾಗಲಿದೆ.
ಸಮೀಕ್ಷೆಯಲ್ಲಿ ನಮೂದಿಸಿದ ಬೆಳೆ ವಿವರ ಸರಿಯಾಗಿರದಿದ್ದರೆ, ಅಧಿಕಾರಿಗಳ ವರದಿ ತಪ್ಪಾಗಿದ್ದರೂ ರೈತರು ಈ ಆ್ಯಪ್ ಮೂಲಕವೇ ಪತ್ತೆ ಹಚ್ಚಬಹುದಾಗಿದೆ. ಲೋಪದೋಷದಿಂದ ಕೂಡಿದ್ದರೆ ಆ ಬಗ್ಗೆ ಅದೇ ಆ್ಯಪ್ ನಲ್ಲೇ ದೂರು ದಾಖಲಿಸಬಹುದು ಇಲ್ಲವೇ ಖುದ್ದಾಗಿ ಸರ್ವೇ ನಂಬರ್ ನೊಂದಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.
ಬೈಟ್: ರಾಜಶೇಖರ ಆನಗೌಡರ(ಸಹಾಯಕ ನಿರ್ದೇಶಕರು ಕೃಷಿ ಇಲಾಖೆ)
ಬೆಳೆ ಸಮೀಕ್ಷೆ ಸಮಯದಲ್ಲಿ ಜಮೀನಿನಲ್ಲಿ ತೆಗೆಯಲಾದ GPS ಆಧಾರಿತ ಛಾಯಾಚಿತ್ರಗಳನ್ನು ವೀಕ್ಷಿಸಬಹುದು. ಸಮೀಕ್ಷೆ ಯಾರು ಮಾಡಿದ್ದಾರೆ ಮತ್ತು ಅವರ ಮೊಬೈಲ್ ಸಂಖ್ಯೆಯ ವಿವರ ಸಿಗಲಿದೆ.
ಸಮೀಕ್ಷೆ ಪ್ರಕಾರ ದಾಖಲಿಸಿದ ಮಾಹಿತಿಯನ್ನು ಮೇಲ್ವಿಚಾರಣೆ ಮಾಡುವ ಕೃಷಿ ಇಲಾಖೆ ಅಧಿಕಾರಿಗಳು ಅಂಗೀಕರಿಸಿದ್ದಾರೋ, ಇಲ್ಲವೋ ತಿಳಿಯಬಹುದು.
ಈ ಕೆಳಗಿರುವ ಲಿಂಕ್ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
https://play.google.com/store/apps/details?id=com.crop.offcsreportskharif
Kshetra Samachara
26/09/2020 09:26 pm