ಕಲಘಟಗಿ:ತಾಲೂಕಿನಲ್ಲಿ ಕಬ್ಬಿನ ಬೆಳೆ ಈ ಬಾರಿ ಉತ್ತಮವಾಗಿ ಬಂದಿದ್ದು,ಕಬ್ಬು ಕಟಾವಿಗೆ ರೈತರು ದೊಡ್ಡ ಯಂತ್ರಗಳನ್ನು ಆಶ್ರಯಿಸಿದ್ದಾರೆ.
ಕಬ್ಬು ಕಟಾವಿನ ಹಂಗಾಮು ಪ್ರಾರಂಭವಾಗಿದ್ದು, ಸಕಾಲಕ್ಕೆ ಕಬ್ಬು ಕಟಾವು ಮಾಡಲು ಯಂತ್ರಗಳನ್ನು ರೈತರು ಬಾಡಿಗೆ ಪಡೆಯುತ್ತಿದ್ದಾರೆ.ಸಕಾಲದಲ್ಲಿ ಕಟಾವಾದ ಕಬ್ಬು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವುದರಿಂದ ರೈತರಿಗೆ ಹಣ,ಸಮಯದ ಉಳಿತಾಯವಾಗುತ್ತಿದೆ.
ಕಬ್ಬು ಕಟಾವು ಯಂತ್ರಗಳ ಬಳಕೆಯಿಂದ ಮಹಾರಾಷ್ಟ್ರದಿಂದ ಬರುವ ಗ್ಯಾಂಗ್ (ಕೂಲಿ ಆಳು) ಗಳ ಮೇಲಿನ ಅವಲಂಬನೆ ತಪ್ಪಿದೆ.
Kshetra Samachara
04/11/2020 08:01 pm