ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪ್ಯಾಟಿ ಬಂದ್ ಇದ್ರೂ ಹಬ್ಬ ನಂಬಿ ಬಂದ್ರೂ ಸಪ್ಪು ಮೋರೆಲಿ ಮನೆಗೆ ಹೋದ್ರು

ಕುಂದಗೋಳ : ವಾರದ ಪ್ರತಿ ಗುರುವಾರ ನೂಲ್ವಿ ಗ್ರಾಮದಲ್ಲಿ ನಡೆಯುತ್ತಿದ್ದ ಶ್ರೀ ಬಸವೇಶ್ವರ ಜಾನುವಾರುಗಳ ಮಾರುಕಟ್ಟೆ ಸಂತೆ ಕೊರೊನಾ ಮುಂಜಾಗ್ರತಾ ಕ್ರಮ ಹಾಗೂ ಜಾನುವಾರುಗಳಿಗೆ ತಗಲುತ್ತಿರುವ ಲಿಂಪ್ ಸ್ಕೀನ್ ರೋಗದ ಪರಿಣಾಮ ಬಂದ್ ಆಗಿದೆ ಆದ್ರೂ ಕೂಡಾ ಈದ್ ಮಿಲಾದ್ ಹಬ್ಬದ ಕಾರಣ ಪ್ಯಾಟಿಗೆ ಆಡು, ಕುರಿ, ಮೇಕೆ ಮಾರಾಟಕ್ಕೆ ತಂದ ರೈತರು ಸಪ್ಪೇ ಮೋರೆ ಹಾಕಿಕೊಂಡು ಮನೆ ಕಡೆ ಹಿಂದಿರುಗಿದ್ದಾರೆ.

ಕುಂದಗೋಳ ತಾಲೂಕಿನ ಹಳ್ಳಿಗಳ ರೈತರು ಬಾಡಿಗೆ ವಾಹನ ಬೈಕ್ ಗಳಲ್ಲಿ ಕುರಿ ಮೇಕೆಗಳನ್ನು ಮಾರಾಟಕ್ಕೆ ತಂದು ಮಾರುಕಟ್ಟೆ ರಸ್ತೆ ಬದಿಯಲ್ಲಿ ನಿಂತು ಕಾದರೂ ಸರಿಯಾಗಿ ಗ್ರಾಹಕರ ಬಾರದ ಕಾರಣ ತಂದ ಕುರಿಗಳಲ್ಲಿ ಒಂದೆರೆಡು ಮಾತ್ರ ಮಾರಾಟ ಮಾಡಿ ಉಳಿದ ಕುರಿಗಳನ್ನ ಮತ್ತೆ ಮನೆಗೆ ತೆಗೆದುಕೊಂಡು ಹೋದರು.

ಇನ್ನು ಕೊರೊನಾ ಮೊದಲ ದಿನಗಳಿಗೆ ಹೋಲಿಸಿದರೇ ಈ ಹಬ್ಬದ ದಿನಗಳಲ್ಲೂ ಅಗ್ಗದ ಬೆಲೆಗೆ ಕುರಿಗಳನ್ನ ಗ್ರಾಹಕರು ಕೇಳುತ್ತಿದ್ದರಿಂದ ಕೆಲ ರೈತರು ಮನೆಗೆ ಹೋದ್ರೆ ಮತ್ತೆ ಬೇರೆ ಗ್ರಾಹಕರು ಬರಬಹುದೆಂಬ ನಿರೀಕ್ಷೆಯಲ್ಲಿ ಹಲವರು ಮಾತ್ರ ಮರದ ನೆರಳು ರಸ್ತೆ ಕಲ್ಲುಗಳ ಮೇಲೆ ಕೂತು ಬಿಸಲಲ್ಲೇ ಗ್ರಾಹಕರನ್ನ ಕಾಯುವ ನೋಟ ಕಂಡು ಬಂದವು.

Edited By : Manjunath H D
Kshetra Samachara

Kshetra Samachara

29/10/2020 03:35 pm

Cinque Terre

23.94 K

Cinque Terre

0

ಸಂಬಂಧಿತ ಸುದ್ದಿ