ಬೆಳಗಾವಿ : ಮನುಷ್ಯನ ಕಂಠದಲ್ಲಿ ಸಿಲುಕಿದ ಲೋಹದ ಶ್ರೀಕೃಷ್ಣ ಮೂರ್ತಿಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು ಕಾರ್ಯ ನಿಜಕ್ಕೂ ಶ್ಲಾಘನೀಯ.
ಹೌದು ಬೆಳಗಾವಿಯ 45 ವರ್ಷದ ವ್ಯಕ್ತಿ ಮನೆಯಲ್ಲಿ ನಿತ್ಯ ಪೂಜೆ ಮಾಡುತ್ತಿದ್ದ ಪೂಜೆ ಮಾಡಿದ ತೀರ್ಥವನ್ನು ಸೇವಿಸುವ ಅಭ್ಯಾಸ ಈತನದ್ದು. ಸದ್ಯ ಎಂದಿನಂತೆ ತೀರ್ಥ ಸೇವನೆ ಮಾಡುವಾಗ ಲೋಹದ ಕೃಷ್ಣನ ಮೂರ್ತಿ ನುಂಗಿ ಬಿಟ್ಟಿದ್ದಾರೆ. ಇದರಿಂದ ಗಂಟಲು ನೋವು, ಊತ ಉಂಟಾಗಿ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿರುವ ವ್ಯಕ್ತಿ. ವೈದ್ಯರ ಸೂಚನೆ ಮೇರೆಗೆ ಎಕ್ಸರೇ ಮಾಡಿಸಿದ್ದಾರೆ. ಅಲ್ಲಿ ವ್ಯಕ್ತಿ ಸೇರಿದಂತೆ ಎಲ್ಲರೂ ಅಚ್ಚರಿ ಪಡುವ ಸಂಗತಿ ತಿಳಿದು ಬಂದಿದೆ.
ಎಕ್ಸರೇ ರಿಪೋರ್ಟಿನಲ್ಲಿ ಗಂಟಲಿನಲ್ಲಿ ಕೃಷ್ಣನ ಮೂರ್ತಿ ಪತ್ತೆಯಾಗುತ್ತಿದ್ದಂತೆ ಆ ವ್ಯಕ್ತಿ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಕೆಎಲ್ ಇ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನು ಇಎನ್ ಟಿ ವಿಭಾದ ವೈದ್ಯ ಡಾ.ಪ್ರೀತಿ ಹಜಾರೆ, ಡಾ.ವಿನಿತಾ ಮೆಡಗುಡ್ಡಮಠ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಗಂಟಲಿನಿಂದ ಮೂರ್ತಿ ಹೊರತೆಗೆದಿದ್ದಾರೆ.
PublicNext
24/06/2022 01:46 pm