ವಿಜಯಪುರ: ವಿಜಯಪುರದ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಸಿಸೇರಿಯನ್‌ಗೆ ಒಳಗಾದ ಬಾಣಂತಿಯರಿಗೆ ಹೊಲಿಗೆ ಹಾಕಲಾಗಿತ್ತು. ಆದ್ರೆ ಕೆಲ ಹೊತ್ತಿನ ನಂತರ ಹಾಕಿದ ಹೊಲಿಗೆ ಬಿಚ್ಚಿದ ಕಾರಣ ಬಾಣಂತಿಯರು ಅದರ ನೋವಿನಿಂದ ನರಳಾಡಿದ್ದರು. ಕೆಲ ಬಾಣಂತಿಯರಿಗೆ ಹೊಲಿಗೆ ಹಾಕಿದ್ದ ಭಾಗಲ್ಲಿ ನಂಜು ಉಂಟಾದ ಬಗ್ಗೆ ವರದಿಯಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ ತನಿಖೆಗಾಗಿ ತಂಡವೊಂದನ್ನು ರಚಿಸಿದ್ದಾರೆ. ಜತೆಗೆ ಆಸ್ಪತ್ರೆಗೆ ತೆರಳಿ ಬಾಣಂತಿಯರ ಸಂಕಟ ಆಲಿಸಿದ್ದಾರೆ.
ಶಸ್ತ್ರಚಿಕಿತ್ಸೆ ಕೊಠಡಿಯಲ್ಲಿಇನ್ಫೆಕ್ಷನ್ ಪರಿಣಾಮದಿಂದ ಈ ಸಮಸ್ಯೆ ಎದುರಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆ, ಡಿಸ್ ಇನ್ಫೆಕ್ಷನ್ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದ್ದಾಗಿ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ತಿಳಿಸಿದರು. ರೋಗಿಗಳನ್ನು ಭೇಟಿ ಮಾಡಿದ ವೇಳೆ, ಈಗಾಗಲೇ ಚಿಕಿತ್ಸೆ ನಡೆಯುತ್ತಿದೆ. ಭಯಪಡುವ ಅಗತ್ಯತೆ ಇಲ್ಲ ಎಂದು ಜಿಲ್ಲಾಧಿಕಾರಿ ಧೈರ್ಯ ತುಂಬಿದರು.
PublicNext
16/05/2022 12:25 pm