ಭುವನೇಶ್ವರ: ಬೆಂಗಳೂರಿನಿಂದ ಕೋಲ್ಕತಾಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸಿತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದಾರೆ. ಕೂಡಲೇ ವಿಮಾನ ತುರ್ತು ಭೂಸ್ಪರ್ಶ ಮಾಡಿಸಿ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ವ್ಯಕ್ತಿ ಮೃತಪಟ್ಟಿದ್ದಾರೆ.
ಏರ್ ಏಶಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ತೈಮೂರ್ ಅಲಿ ಖಾನ್ (33) ಮೃತಪಟ್ಟವರು. ಪಶ್ಚಿಮ ಬಂಗಾಳದ ಪುರ್ಬಾ ಮೆದ್ನಿಪುರ್ ನಿವಾಸಿ ಆಗಿದ್ದ ಇವರು ಬೆಂಗಳೂರಿನಿಂದ ಕೋಲ್ಕತಾವರೆಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಅಸ್ವಸ್ಥರಾಗಿದ್ದಾರೆ. ಮಾರ್ಗ ಮಧ್ಯದ ಭುವನೇಶ್ವರದಲ್ಲಿ ವಿಮಾನ ತುರ್ತು ಭೂ ಸ್ಪರ್ಶ ಮಾಡಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ವೇಳೆ ತೈಮೂರ್ ಮೃತಪಟ್ಟಿದ್ದಾರೆ.
PublicNext
13/03/2022 10:50 pm