ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಗಾಂಗ ದಾನ ಮಾಡಿ ಹೋದ ಮಂಡ್ಯದ ರೈತನ ಮಗ ಹೇಮಂತ್ ಕುಮಾರ್

ಮಂಡ್ಯ: ಇಲ್ಲಿಯ 27 ವರ್ಷದ ಯುವಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ತೆಂಗಿನ ಮರದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಈ ಯುವಕನ ಮೆದುಳು ನಿಷ್ಕ್ರಿಯವಾಗಿತ್ತು. ಈ ಹಿನ್ನೆಲೆಯಲ್ಲಿಯೇ ಪೋಷಕರು ಈ ಯುವಕ ಅಂಗಾಂಗ ದಾನ ಮಾಡಿ ಇತರರಿಗೆ ಮಾದರಿ ಆಗಿದ್ದಾರೆ.

ಅಂಗಾಂಗ ದಾನ ಮಾಡಿದ ಯುವಕನ ಹೆಸರು ಹೇಮಂತ್ ಕುಮಾರ್,ಮಂಡ್ಯ ಜಿಲ್ಲೆಯ ತೂಬಿನಕೆರೆ ನಿವಾಸಿ. ವಿಶೇಷ ಅಂದ್ರೆ ಈತ ರೈತನ ಮಗ. ಮೊನ್ನೆ ಗುರುವಾರ ತೆಂಗಿನ ಮರದಿಂದ ಕೆಳಗೆ ಬಿದ್ದಿದ್ದಾನೆ.

ಆಗಲೇ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಮೆದುಳು ನಿಷ್ಕ್ರಿಯವಾಗಿದ್ದರಿಂದಲೇ ಈತನ ಹೃದಯದ ಕವಾಟ,ಎರಡೂ ಕಿಡ್ನಿ,ಲಿವರ್ ದಾನ ಮಾಡಲಾಗಿದೆ. ಈ ಒಂದು ಸಾರ್ಥಕ ಕಾರ್ಯದಿಂದ ನಾಲ್ವರ ಜೀವ ಉಳಿಸೋಕೆ ಸಹಾಯವಾಗಿದೆ.

Edited By :
PublicNext

PublicNext

11/11/2021 02:01 pm

Cinque Terre

20.68 K

Cinque Terre

0