ವಿಜಯಪುರ: ಉಪಚುನಾವಣೆಯಲ್ಲಿ ನಿರಂತರ ಪ್ರಚಾರ ಮಾಡಿ ಸುಸ್ತಾದ ದೇವೆಗೌಡರಿಗೆ ದಿನಕ್ಕೆ ಎರಡು ಬಾರಿ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯಪುರ ನಗರದ ಸ್ಫೂರ್ತಿ ರೆಸಾರ್ಟ್‌ನಲ್ಲಿ ಉಳಿದುಕೊಂಡಿರುವ ದೇವೆಗೌಡರಿಗೆ ಕುಚನೂರು ಆಸ್ಪತ್ರೆ ವೈದ್ಯ ಡಾ. ಬಾಬು ಕುಚನೂರು ಅವರು ಚಿಕಿತ್ಸೆ ನೀಡುತ್ತಿದ್ದಾರೆ.
ಮಂಡಿನೋವು, ಸೊಂಟ ನೋವು ಸಮಸ್ಯೆಗೆ ಫಿಸಿಯೋಥೆರಪಿ ಹಾಗೂ ಮಸಾಜ್ ಟ್ರೀಟ್ಮೆಂಟ್ ನೀಡಲಾಗುತ್ತಿದೆ. ನಿನ್ನೆ ಬುಧವಾರ ಪ್ರಚಾರದ ವೇಳೆ ಬೈಕ್ ಮೇಲೆ ತೆರಳಿದ ದೇವೆಗೌಡರು ಮತಯಾಚಿಸಿದ್ದರು.
PublicNext
28/10/2021 10:35 pm