ಕೊಪ್ಪಳ: ನಾ ಆರಾಮ್ ಅದೇನಿ. ಸುಮ್ನ ಇಂಜೆಕ್ಷನ್ ಮಾಡಿ ಆರೋಗ್ಯ ಕೆಡಸಬ್ಯಾಡ್ರಿ. ಹೀಗೆ ವೃದ್ಧನೋರ್ವ ಅಧಿಕಾರಿಗಳ ಮುಂದೆ ನನಗೆ ವ್ಯಾಕ್ಸಿನ್ ಬೇಡ ಎಂದು ಅವಲತ್ತುಕೊಂಡಿದ್ದಾನೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗದಿಗೇರಿಯಲ್ಲಿ ಈ ಘಟನೆ ನಡೆದಿದೆ.
ನಿನ್ನೆ ಬುಧವಾರ ಕಂದಾಯ ಇಲಾಖೆ ಹಾಗು ಆರೋಗ್ಯ ಇಲಾಖೆಯಿಂದ ಗ್ರಾಮದಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಗ್ರಾಮದ ವೃದ್ಧ ವ್ಯಕ್ತಿಗೆ ಲಸಿಕೆ ಹಾಕಿಸಿಕೊಳ್ಳುವಾಗ ಆತ ಹೈಡ್ರಾಮಾ ಮಾಡಿದ್ದಾನೆ. ಇಂಜೆಕ್ಷನ್ ಕೊಟ್ಟು ನನ್ನನ್ನು ಸಾಯಿಸಬೇಡಿ. ನನ್ನ ಬಿಟ್ಟು ಬಿಡಿ ಎಂದು ಬಾಯಿ ಬಡಿದುಕೊಂಡು ರಂಪಾಟ ಮಾಡಿದ್ದಾನೆ. ಕೊನೆಗೂ ಅಧಿಕಾರಿಗಳು ಆತನ ಮನವೊಲಿಸಿ ಲಸಿಕೆ ಹಾಕಿಸಿದ್ದಾರೆ.
PublicNext
28/10/2021 08:57 pm