ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ ನಿಂತ ಮೃತಪಟ್ಟವರಿಗೆ ಆಯಾ ರಾಜ್ಯಗಳೇ 50,000 ರೂ. ನೀಡಲಿವೆ : ಕೇಂದ್ರದಿಂದ ಸ್ಪಷ್ಟನೆ

ನವದೆಹಲಿ: ಹೆಮ್ಮಾರಿ ಸೋಂಕಿಗೆ ಬಲಿಯಾದವರಿಗೆ ಆಯಾ ರಾಜ್ಯಸರ್ಕಾರಗಳು ಮಹಾಮಾರಿ ತಲಾ 50 ಸಾವಿರ ರೂ.ಪರಿಹಾರ ನೀಡಲಿವೆ ಎಂದು ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿದೆ. ಇಲ್ಲಿಯವರೆಗೆ ಮೃತಪಟ್ಟಿರುವ ಕುಟುಂಬಗಳಿಗೆ ಮಾತ್ರವಲ್ಲದೆ, ಮುಂದೆಯು ಕೋವಿಡ್ ನಿಂದ ಬಲಿಯಾದರೆ ಅಂತಹವರಿಗೆ 50 ಸಾವಿರ ರೂ. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಉನ್ನತ ನ್ಯಾಯಾಲಯ ಆದೇಶಿಸಿದೆ.

ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಆಯಾ ರಾಜ್ಯಗಳು ಕೊರೊನಾ ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನು ಭರಿಸಲಿವೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಥವಾ ಜಿಲ್ಲಾಡಳಿತ ಮುಖೇನ ಪರಿಹಾರ ವಿತರಣಾ ಪ್ರಕ್ರಿಯೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೊರ್ಟ್ ಗೆ ಹೇಳಿದೆ.

ಭಾರತದಲ್ಲಿ 2020ರ ಜನವರಿಯಲ್ಲಿ ಕೋವಿಡ್ ಸ್ಫೋಟ ಆದಾಗಿನಿಂದ ಇಲ್ಲಿಯವರೆಗೂ 4.45 ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮೃತ ಕುಟುಂಬದವರು ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಸಂಬಂಧಪಟ್ಟ ಅರ್ಜಿಯಲ್ಲಿ ಕೇಳಲಾದ ದಾಖಲಾತಿಗಳ ಸಮೇತ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಆಧಾರ್ ಲಿಂಕ್ ಆದ ಬ್ಯಾಂಕ್ ಖಾತೆಗಳಿಗೆ ಮೊತ್ತ ಜಮಾ ಆಗಲಿದೆ.

Edited By : Nirmala Aralikatti
PublicNext

PublicNext

22/09/2021 06:46 pm

Cinque Terre

69.48 K

Cinque Terre

1

ಸಂಬಂಧಿತ ಸುದ್ದಿ