ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

5 ಕೆ.ಜಿ.ಸ್ತನಗಡ್ಡೆ ಹೊರತೆಗೆದ ವೈದ್ಯರು

ಭಾಲ್ಕಿ: ಸ್ತನಗಡ್ಡೆ ನೋವಿನಿಂದ ಬಳಲುತ್ತಿದ್ದ ಹುಮನಾಬಾದ್ ತಾಲ್ಲೂಕಿನ ಗ್ರಾಮವೊಂದರ ಮಹಿಳೆಯೊಬ್ಬರ ಸ್ತನ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಬರೋಬ್ಬರಿ 5 ಕೆ.ಜಿ. ತೂಕದ ಸ್ತನಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

ಈ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ತಳವಾಡೆ ಆಸ್ಪತ್ರೆಯ ವೈದ್ಯರು ನಡೆಸಿದ್ದಾರೆ. ಶಸ್ತ್ರಚಿಕಿತ್ಸಕ ಅನಿಲ್ಕುಮಾರ ತಳವಾಡೆ ಅವರ ಮಾರ್ಗದರ್ಶನದಲ್ಲಿ ಕಲಬುರ್ಗಿಯ ಪರಿಣತ ಶಸ್ತ್ರಚಿಕಿತ್ಸಕ ಗುರುರಾಜ ದೇಶಪಾಂಡೆ, ಸ್ತ್ರೀರೋಗ ತಜ್ಞೆ ಶೈಲಜಾ ತಳವಾಡೆ, ಅರವಳಿಕೆ ತಜ್ಞ ವಿಜಯಕುಮಾರ ರಾಠೋಡ ಹಾಗೂ ವೈದ್ಯಕೀಯ ತಂಡದವರು ಅಂದಾಜು 3 ಗಂಟೆ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.

20 ವರ್ಷದ ನನ್ನ ವೈದ್ಯಕೀಯ ಸೇವಾವಧಿಯಲ್ಲಿ ಇದೇ ಮೊದಲು ಬಾರಿಗೆ ಇಷ್ಟು ದೊಡ್ಡ ಗಾತ್ರದ ಸ್ತನಗಡ್ಡೆ ನೋಡಿದ್ದೇನೆ ಎಂದು ಪರಿಣತ ಶಸ್ತ್ರಚಿಕಿತ್ಸಕ ಗುರುರಾಜ ದೇಶಪಾಂಡೆ ತಿಳಿಸಿದ್ದಾರೆ. ಸದ್ಯ ಮಹಿಳೆ ಜೀವ ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ತ್ರೀರೋಗ ತಜ್ಞೆ ಡಾ.ಶೈಲಜಾ ತಳವಾಡೆ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

14/09/2021 01:37 pm

Cinque Terre

30.04 K

Cinque Terre

4

ಸಂಬಂಧಿತ ಸುದ್ದಿ