ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಕರೋನಾ ಲಸಿಕೆ ಪಡೆದ ಮಂಗಿಹಾಳ ಗ್ರಾಮಸ್ಥರು.!

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಮಂಗಿಹಾಳ ಗ್ರಾಮದಲ್ಲಿ ಇಂದು ಕರೋನಾ ಲಸಿಕೆ ಹಾಕಲಾಯಿತು.

ಗ್ರಾಮದಲ್ಲಿರೋ ಜನರಿಗೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ. ಜೊತೆಗೆ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ ಹಿರಿಯರಿಗೆ ತಿಳಿ ಹೇಳಿ ಲಸಿಕೆ ನೀಡಲಾಯಿತು.

ಪೇಠ ಅಮ್ಮಾಪುರ ಪ್ರಾಥಮಿಕ ಅರೋಗ್ಯ ಕೇಂದ್ರದ ಅರೋಗ್ಯ ಮಹಿಳಾ ಸಹಾಯಕಿ ಬಸಮ್ಮ ಅವರು, ಮೊದಲನೇ ಡೋಸ್ ಪಡೆದವರಿಗೆ 2ನೇ ಡೋಸ್ ಹಾಗೂ ಹೊಸದಾಗಿ ಕರೋನಾ ಡೋಸ್ ಹಾಕಿಸಿಕೊಳ್ಳುವವರಿಗೂ ಕೂಡ ಲಸಿಕೆ ನೀಡಿದರು.

ಇನ್ನು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಗ್ರಾಪಂ ಸಿಬ್ಬಂದಿ ಕೂಡ ಲಸಿಕೆ ಹಾಕಿಸುವಲ್ಲಿ ಯಶಸ್ವಿಯಾದರು.

ಈ ಸಂಧರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಲಕ್ಷ್ಮಿ, ಅರುಣಾ, ಸರೋಜಾ, ಪಂಪ್ ಆಪರೇಟರ್ ಯಮನಪ್ಪ ಮಡಿವಾಳರ ಸೇರಿದಂತೆ ಇತರರು ಇದ್ದರು.

Edited By : Shivu K
PublicNext

PublicNext

08/09/2021 04:27 pm

Cinque Terre

54.91 K

Cinque Terre

0