ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆ ಮದ್ದು

ಇತ್ತೀಚಿನ ದಿನಗಳಲ್ಲಿ ಗ್ಯಾಸ್, ಅಸಿಡಿಟಿ ಆಗಿದೆ ಎನ್ನುವವರೇ ಹೆಚ್ಚು. ಹೊಟ್ಟೆಯಲ್ಲಿ ಉರಿಯುವುದು, ಹುಳಿಯಾದ ತೇಗು ಇದರ ಲಕ್ಷಣವಾಗಿದೆ.

ಪ್ರಸ್ತುತ ಜೀವನಶೈಲಿಯಿಂದ ಪ್ರತಿಯೊಬ್ಬರು ಈ ಸಮಸ್ಯೆಗೆ ಗುರಿ ಯಾಗುತ್ತಿದ್ದಾರೆ. ಸರಿಯಾದ ಸಮಯಕ್ಕೆ ಊಟ ಮಾಡದಿರುವುದು, ಮಸಾಲೆ ಪದಾರ್ಥ ಹಾಗೂ ಫಾಸ್ಟ್ ಫುಡ್ ಸೇವಿಸುವುದರಿಂದ ಗ್ಯಾಸ್, ಮಲಬದ್ಧತೆ, ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತವೆ. ಮನೆಯಲ್ಲೇ ಇರುವ ಅಡುಗೆ ಪದಾರ್ಥ ಬಳಸಿ ಮನೆಮದ್ದು ತಯಾರಿಸಿ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

ಮನೆಮದ್ದು ಮಾಡುವ ವಿಧಾನ: ಹಂಚಿನ ಮೇಲೆ ಇಂಗಿನ ಪುಡಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ ನಂತರ ಓಂ ಕಾಳನ್ನು ಹಾಕಿ ಅದನ್ನು ಚೆನ್ನಾಗಿ ಇಂಗಿನೊಂದಿಗೆ ಹುರಿದುಕೊಳ್ಳಬೇಕು ಅದು ಕಂದು ಬಣ್ಣಕ್ಕೆ ಬಂದ ನಂತರ ಇಂಗು ಹಾಗೂ ಓಂಕಾಳಿನ ಪುಡಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು.ಇದನ್ನು ಒಂದು ಬೌಲ್ ಗೆ ಹಾಕಿ. ಈ ಪುಡಿಯನ್ನು ಒಂದು ಚಮಚದಂತೆ ನೀರಿನೊಂದಿಗೆ ಮಿಕ್ಸಿ ಮಾಡಿ ಪ್ರತಿ ದಿನ ಸೇವಿಸಿದರೆ ನಿಮ್ಮ ಅಸಿಡಿಟಿ ಸಮಸ್ಯೆಗೆ ಉತ್ತಮ ಪರಿಹಾರ ಕಂಡುಕೊಳ್ಳಬಹುದು.

Edited By : Nirmala Aralikatti
PublicNext

PublicNext

01/02/2021 04:17 pm

Cinque Terre

34.3 K

Cinque Terre

0