ಇತ್ತೀಚಿನ ದಿನಗಳಲ್ಲಿ ಬೊಜ್ಜು ಕರಗಿಸಲಿಕೊಳ್ಳಲು ಅನೇಕರು ಅನೇಕ ರೀತಿಯಲ್ಲಿ ವಿವಿಧ ಪ್ರಯತ್ನ ಮಾಡುತ್ತಾರೆ. ಕೆಲವರು ಊಟವನ್ನು ತೇಜಿಸಿ ಕಠಿಣ ಪರಿಶ್ರಮ ವಹಿಸುತ್ತಾರೆ ಆದರೆ ನಿಮಗೆ ಗೊತ್ತೆ ಪ್ರೋಟೀನ್ ಆಹಾರದಿಂದ ಬೊಜ್ಜು ಕರಗಿಸಬಹುದು.
ದಿನನಿತ್ಯದ ಪ್ರೋಟೀನ್ ಯುಕ್ತ ಆಹಾರ ಸೇವನೆಯಿಂದ ದೇಹದ ತೂಕವನ್ನು ಇಳಿಸಬಹುದಾಗಿದೆ.
ಹೆಚ್ಚುಪಥ್ಯೆಮಾಡುತ್ತಿದ್ದವರು ತಮ್ಮಆಹಾರ ಕ್ರಮವನ್ನು ಬದಲಾಯಿಸಿಕೊಂಡು ಪ್ರೋಟೀನ್ ಯುಕ್ತ ಆಹಾರವನ್ನು ಸೇವನೆ ಮಾಡುವುದರಿಂದಾಗಿ ತಮ್ಮ ತೂಕವನ್ನು ಇಳಿಸಿಕೊಂಡಿದ್ದಾರೆ ಎಂದು ದ ಅಮೇರಿಕನ್ ಜರ್ನಲ್ ಸಂಶೋಧಕರ ಅಧ್ಯಯನವನ್ನು ವರದಿ ಮಾಡಿದೆ.
ಪ್ರೋಟೀನ್ ಯುಕ್ತ ಆಹಾರ ಪದ್ಧತಿಯನ್ನು ಯಾವುದೇ ಪಥ್ಯೆ ಮಾಡದೇ ಸೇವಿಸುವುದರಿಂದ ದಿನಕ್ಕೆ ಸುಮಾರು 80 ಕ್ಯಾಲೋರಿಗಳನ್ನು ಕರಗಿಸಬಹುದಾಗಿದೆ ಹಾಗೂ ದೇಹದ ತೂಕ ಇಳಿಸಬಹುದಾಗಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಿದೆ.
ಪ್ರೋಟೀನ್ ಯುಕ್ತ ಆಹಾರಗಳ ಸೇವನೆಯಿಂದಾಗಿ ಆಹಾರದ ಉಷ್ಣಪರಿಣಾಮ ಅಥವಾ ಆಹಾರ ಪ್ರೇರಿತ ಥರ್ಮೋಜೆನಿಸಿಸ್ ಎಂದೂ ಕರೆಯಲ್ಪಡುವ ನಿರ್ದಿಷ್ಟ ಕ್ರಿಯಾತ್ಮಕ ಕ್ರಿಯೆಯಿಂದಾಗಿ ದೇಹದಲ್ಲಿನ ಬೊಜ್ಜು ಕರಗಲು ಸಾಧ್ಯ.
ಮೊಟ್ಟೆ, ಕೋಳಿಮಾಂಸ, ಮಸೂರ, ಬೇಳೆಗಳು,ಸೋಯಾ ಉತ್ಪನ್ನಗಳು, ಹಾಲು ಪ್ರೋಟೀನ್ ಯುಕ್ತ ಆಹಾರವೆಂದು ಸಂಶೋಧಕರ ತಂಡ ಹೇಳಿದೆ.
PublicNext
21/01/2021 01:39 pm