ಬೆಂಗಳೂರು: ಡೆಡ್ಲಿ ಸೋಂಕು ಕೊರೊನಾ ಇನ್ನು ಸಂಪೂರ್ಣವಾಗಿ ನಿರ್ಣಾಮವಾಗಿಲ್ಲ. ಇನ್ನು ಮನುಷ್ಯರನ್ನು ಬೆಂಬಿಡದೇ ಕಾಡುತ್ತಿದೆ.
ರಾಜ್ಯದಲ್ಲಿಂದು ಡೆಡ್ಲಿ ಸೋಂಕಿನಿಂದಾಗಿ 4 ಜನ ಸಾವನಪ್ಪಿದ್ದು 501 ಜನರಲ್ಲಿ ಸೋಂಕು ಪತ್ತೆಯಾಗಿದೆ.ಇದರೊಂದಿಗೆ ಸೋಂಕಿತರ ಸಂಖ್ಯೆ 9,33,578ಕ್ಕೆ ಏರಿಕೆಯಾಗಿದೆ.
ಸಾವಿನ ಸಂಖ್ಯೆ 12,185ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ಇಂದು 260 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 3,95,769ಕ್ಕೆ ಏರಿಕೆಯಾಗಿದೆ.
ಇನ್ನು ನಗರದಲ್ಲಿ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಇಂದು 665 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಈ ಮೂಲಕ ಚೇತರಿಸಿಕೊಂಡವರ ಸಂಖ್ಯೆ 9,13,677ಕ್ಕೆ ಏರಿಕೆಯಾಗಿದೆ.
ಇನ್ನು 7,697 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 168 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
PublicNext
20/01/2021 07:40 pm