ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೈದ್ಯರು ಸಲಹೆ ಕೊಟ್ಟರೆ ಲಸಿಕೆ ಪಡೆಯುತ್ತೇನೆ: ಯಡಿಯೂರಪ್ಪ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ರಾಜ್ಯಾದ್ಯಂತ ಕೊರೊನಾ ಲಸಿಕೆ ಅಭಿಯಾನಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ನನಗೆ ಲಸಿಕೆ ಪಡೆಯಲು ಹೇಳಿದರೆ ಖಂಡಿತ ನಾನು ಲಸಿಕೆ ಪಡೆಯುತ್ತೇನೆ. ಆ ಮೂಲಕ ಸಾಮಾನ್ಯ ಜನರಲ್ಲೂ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಮೋದಿಯವರು ಕೊರೊನಾ ಲಸಿಕೆ ಮಾಹಿತಿಯನ್ನು ನೀಡಿದ್ದಾರೆ. 243 ಕಡೆ ಪ್ರತಿ ಕೇಂದ್ರದಲ್ಲಿ 100 ಜನರಿಗೆ ಲಸಿಕೆ ನೀಡಲಾಗುತ್ತದೆ. ಪ್ರತಿ‌ ನಿತ್ಯ ಈ ಸಂಖ್ಯೆ ಹೆಚ್ಚಳ ಆಗಲಿದೆ. ನಾಗರತ್ನ ಎಂಬ ಮಹಿಳೆಗೆ ಈಗಷ್ಟೇ ಲಸಿಕೆ ಕೊಡಲಾಗಿದೆ. ಡಾ.ಸುದರ್ಶನ್ ಬಲ್ಲಾಳ್ ಸೇರಿದಂತೆ ಹಲವು ಗಣ್ಯರು ಲಸಿಕೆ ಪಡೆಯುತ್ತಿದ್ದಾರೆ. ನಮ್ಮ ದೇಶದಲ್ಲೇ ತಯಾರಾದ ಲಸಿಕೆ, ವಿಶ್ವದ ಗಮನ ಸೆಳೆಯುವ ರೀತಿಯಲ್ಲಿ ವ್ಯಾಕ್ಸಿನ್ ಹಂಚಿಕೆ ಆಗಿದೆ ಎಂದು ಸಿಎಂ ಹೇಳಿದರು.

Edited By : Nagaraj Tulugeri
PublicNext

PublicNext

16/01/2021 03:47 pm

Cinque Terre

100.56 K

Cinque Terre

1

ಸಂಬಂಧಿತ ಸುದ್ದಿ