ನವದೆಹಲಿ : ಮಾನವ ಕುಲಕ್ಕೆ ಕಂಟಕವಾಗಿ ಪರಿಣಮಿಸಿದ ಡೆಡ್ಲಿ ಸೋಂಕು ಕೊರೊನಾ ಸೃಷ್ಟಿಸಿದ ಅವಾಂತರ ಒಂದೆರಡಲ್ಲ.
ಮದ್ದು ಸಿಗದೇ ಜಗತ್ತಿನಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದನ್ನು ಯಾರು ಮರೆಯುವಂತಿಲ್ಲ ಸದ್ಯ ಸೋಂಕಿನ ಹುಟ್ಟಡಗಿಸಲು ಬ್ರಹ್ಮಾಸ್ತ್ರವೊಂದು ಕೈ ಸೇರಿದೆ.
ಜ.16ರಿಂದ ದೇಶಾದ್ಯಂತ ಕೋವಿಡ್-19 ಅಭಿಯಾನ ಆರಂಭವಾಗಲಿದ್ದು ಆರಂಭದಲ್ಲಿ ಸುಮಾರು 3 ಕೋಟಿ ಕೊರೊನಾ ವಾರಿಯರ್ಸ್ ಗೆ ಈ ಲಸಿಕೆ ನೀಡಲಾಗುತ್ತದೆ.
ಕೋವಿಡ್-19 ಲಸಿಕೆ ನೀಡಲು ಎರಡು ಡೋಸ್ ಗಳ ಮಧ್ಯೆ 28 ದಿನಗಳ ಅಂತರವಿದ್ದು, ಲಸಿಕೆಯ ಪರಿಣಾಮ ಎರಡನೇ ಡೋಸ್ ನೀಡಿದ 14 ದಿನಗಳ ನಂತರ ಕಂಡುಬರಲಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್, ಎರಡನೇ ಡೋಸ್ ನೀಡಿದ 14 ದಿನಗಳ ನಂತರವಷ್ಟೇ ಅದರ ಪರಿಣಾಮ ಗೊತ್ತಾಗಲಿದೆ. ಹೀಗಾಗಿ ಅಷ್ಟು ದಿನ ಲಸಿಕೆ ಹಾಕಿಸಿಕೊಂಡವರು ಜಾಗರೂಕರಾಗಿರಬೇಕು. ಲಸಿಕೆ ಹಾಕಿದ ತಕ್ಷಣ ನಾವು ಸುರಕ್ಷಿತರು ಎಂಬ ತೀರ್ಮಾನಕ್ಕೆ ಬರಬಾರದು, ಎರಡೂ ಲಸಿಕೆಗಳ ಮಧ್ಯೆ 28 ದಿನಗಳ ಅಂತರವಿರುತ್ತದೆ ಎಂದರು.
PublicNext
13/01/2021 09:02 am