ನವದೆಹಲಿ: ವಿಶ್ವದ ನೆಮ್ಮದಿ ಕಸಿದುಕೊಂಡಿದ್ದ ಡೆಡ್ಲಿ ಸೋಂಕು ಕೊರೊನಾ ಮಾನವ ಕುಲಕ್ಕೆ ಕಂಟಕವಾಗಿ ಪರಿಣಮಿಸಿತ್ತು.
ಈ ಸೋಂಕಿಗೆ ಔಷಧಿ ಇಲ್ಲದೆ ಅನೇಕ ಸಾವು ನೋವುಗಳು ಸಂಭವಿಸಿದ್ದನ್ನು ಯಾರು ಮರೆಯುವಂತಿಲ್ಲ.
ಸದ್ಯ ಡೆಡ್ಲಿ ಸೋಂಕಿಗೆ ರಾಮಬಾಣ ಸಿಕ್ಕಿದೆ. ಸೋಂಕಿನ ಅಟ್ಟಹಾಸ ತಡೆಯಲು ಬ್ರಹ್ಮಾಸ್ತ್ರವೊಂದು ತರಾಯಾರಿದ್ದು ಸದ್ಯ ಕೋವಿಡ್ ವ್ಯಾಕ್ಸಿನ್ ಕರ್ನಾಟಕ್ಕೂ ಬಂದು ತಲುಪಿದೆ. ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ನಿಂದ ಹೊರಟ ಕೋವಿಶೀಲ್ಡ್ ಕೋವಿಡ್-19 ಲಸಿಕೆ ಬೆಂಗಳೂರು, ದೆಹಲಿ ಸೇರಿದಂತೆ ದೇಶದ ವಿವಿಧ ಮಹಾನಗರಗಳಿಗೆ ತಲುಪಿದೆ.
ಇಂದು ಬೆಳಗ್ಗೆ 8 ಗಂಟೆಗೆ ಪುಣೆ ವಿಮಾನ ನಿಲ್ದಾಣದಿಂದ ಹೊರಟ ಸ್ಪೈಸ್ ಜೆಟ್ ವಿಮಾನ ಲಸಿಕೆಯನ್ನು ಹೊತ್ತು ದೆಹಲಿ ವಿಮಾನ ನಿಲ್ದಾಣಕ್ಕೆ 10 ಗಂಟೆ ಬಂದಿಳಿಯಿತು.
ಮೂರು ತಾಪಮಾನ ನಿಯಂತ್ರಣ ಟ್ರಕ್ ಗಳು ಇಂದು ನಸುಕಿನ ಜಾವ 5 ಗಂಟೆ ಸುಮಾರಿಗೆ ಸೆರಂ ಇನ್ಸ್ ಟಿಟ್ಯೂಟ್ ನಿಂದ ವಿಮಾನ ನಿಲ್ದಾಣ ಕಡೆಗೆ ಹೊರಟಿತು. ಲಸಿಕೆಯನ್ನು ಹೊತ್ತ ವಾಹನಕ್ಕೆ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಲಾಯಿತು. ಕೋವಿಶೀಲ್ಡ್ ಲಸಿಕೆಯನ್ನು ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯ ಮತ್ತು ಬ್ರಿಟನ್-ಸ್ವೀಡನ್ ಮೂಲದ ಕಂಪೆನಿ ಅಸ್ಟ್ರಾಝೆನೆಕಾ ಅಭಿವೃದ್ಧಿಪಡಿಸಿದ್ದು ಸೆರಂ ಇನ್ಸ್ ಟಿಟ್ಯೂಟ್ ಉತ್ಪಾದನೆ ಮಾಡಿದೆ.
ಇದೇ 16 ರಿಂದ ಕೋವಿಡ್-19 ಲಸಿಕಾ ಅಭಿಯಾನ ದೇಶಾದ್ಯಂತ ಆರಂಭವಾಗುತ್ತಿದ್ದು, ಆರಂಭದಲ್ಲಿ ಕೋವಿಡ್-19 ವಾರಿಯರ್ಸ್ ಗೆ ನೀಡಲಾಗುತ್ತದೆ.
PublicNext
12/01/2021 12:00 pm