ನವದೆಹಲಿ: ಕೊರೊನಾ ಲಸಿಕೆ ಬಗ್ಗೆ ಯಾವುದೇ ವದಂತಿ ಹಾಗೂ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಎಲ್ಲ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಈ ಲಸಿಕೆ ನೀಡಬೇಕೆಂದು ನಾವಷ್ಟೇ ನಿರ್ಧರಿಸಿಲ್ಲ. ದೇಶದ ವಿಜ್ಞಾನಿಗಳು, ತಜ್ಞರು ಸುಧೀರ್ಘ ಅಧ್ಯಯನ ನಡೆಸಿ ಕೊರೊನಾ ಲಸಿಕೆಗೆ ಒಪ್ಪಿಗೆ ನೀಡಿದ್ದಾರೆ. ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ ತುರ್ತು ಬಳಕೆಗೆ ಒಪ್ಪಿಗೆ ನೀಡಿದೆ. ಹೀಗಾಗಿ ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಮೋದಿ ದೇಶದ ಜನರಿಗೆ ಮನವಿ ಮಾಡಿದ್ದಾರೆ.
PublicNext
11/01/2021 10:51 pm