ನವದೆಹಲಿ: ಕಳೆದ 24 ಗಂಟೆಗಳಲ್ಲಿ 9 ಜನರಲ್ಲಿ ರೂಪಾಂತರಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಿಂದ ಹೊಸ ತಳಿಯ ಸೋಂಕಿಗೆ ಗುರಿಯಾದವರ ಸಂಖ್ಯೆ ಭಾರತದಲ್ಲಿ 38ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಚಿವಾಲಯ ಬಿಡುಗಡೆ ಮಾಡಿದ ಅಧಿಕೃತ ಪಟ್ಟಿಯ ಪ್ರಕಾರ, ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಒಟ್ಟು 10 ಮಾದರಿಗಳನ್ನು ಪತ್ತೆ ಮಾಡಲಾಗಿದೆ. ಸಿಸಿಎಂಬಿ, ಹೈದರಾಬಾದ್‌ನಲ್ಲಿ ಮೂರು, ಪುಣೆಯ ಎನ್ಐವಿಯಲ್ಲಿ ಐದು, ದೆಹಲಿಯ ಐಜಿಐಬಿಯಲ್ಲಿ 11, ನವದೆಹಲಿಯ ಎನ್‌ಸಿಡಿಸಿಯಲ್ಲಿ ಎಂಟು ಮತ್ತು ಕೋಲ್ಕತ್ತಾದ ಎನ್‌ಸಿಬಿಜಿಯಲ್ಲಿ ಒಂದು ಪ್ರಕರಣ ವರದಿಯಾಗಿವೆ.
ತಜ್ಞರ ಪ್ರಕಾರ, ಬ್ರಿಟನ್‌ನಲ್ಲಿ ಕಂಡುಬಂದಿರುವ ಸಾರ್ಸ್-ಕೋವಿಡ್-2, ಶೇ.70 ರಷ್ಟು ಹೆಚ್ಚು ಹರಡುವ ಸಾಧ್ಯತೆಗಳಿವೆ. ಹೊಸ ರೂಪಾಂತರ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಭಾರತ ಸೇರಿದಂತೆ ಹಲವಾರು ದೇಶಗಳು ಬ್ರಿಟನ್‌ನೊಂದಿಗಿನ ವಿಮಾನ ಸಂಪರ್ಕವನ್ನು ಸ್ಥಗಿತಗೊಳಿಸಿವೆ ಮತ್ತು ಅಲ್ಲಿಂದ ಹಿಂದಿರುಗಿದವರ ತಪಾಸಣೆ ಪ್ರಾರಂಭಿಸಿವೆ.
PublicNext
04/01/2021 10:06 pm