ಲಂಡನ್: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೊರೊನಾ ವೈರಸ್ ಲಸಿಕೆಯನ್ನು ಅಂಗೀಕರಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಬ್ರಿಟನ್ ಬುಧವಾರ ಪಾತ್ರವಾಗಿದೆ.
"ಅಸ್ಟ್ರಾಜೆನೆಕಾ ಕೊರೊನಾ ಲಸಿಕೆಯನ್ನು ತುರ್ತು ಬಳಕೆಗೆ ಆದೇಶಿಸಿ ಔಷಧಿ ಮತ್ತು ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (MHRA)ಯ ಶಿಫಾರಸನ್ನು ಬ್ರಿಟನ್ ಸರ್ಕಾರ ಇಂದು ಸ್ವೀಕರಿಸಿದೆ" ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಬ್ರಿಟನ್‌ನಲ್ಲಿ ರೂಪಾಂತರಿತ ಕೊರೊನಾ ಹೆಚ್ಚಾಗುತ್ತಿದ್ದು, ವಿವಿಧ ದೇಶಗಳಿಗೆ ಮತ್ತೆ ಕೊರೊನಾ ಸೋಂಕನ್ನು ಪಸರಿಸುತ್ತಿದೆ. ಹೀಗಾಗಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರವು ಆಸ್ಟ್ರಾಜೆನೆಕಾ ಕೊರೊನಾ ಲಸಿಕೆಗೆ ಅನುಮತಿ ನೀಡಿದೆ. ಮೊದಲ ಡೋಸ್ ಇಂದು ಬಿಡುಗಡೆಯಾಗಿದೆ.
ಹೆಮ್ಮಾರಿ ಕೊರೊನಾ ಸಾಂಕ್ರಾಮಿಕ ರೋಗವು ಈಗಾಗಲೇ ವಿಶ್ವದಾದ್ಯಂತ 1.7 ಮಿಲಿಯನ್ ಜನರನ್ನು ಬಲಿ ಪಡೆದಿದೆ. ಜಾಗತಿಕ ಆರ್ಥಿಕತೆಯ ಮೂಲಕ ಅವ್ಯವಸ್ಥೆಯನ್ನು ಉಂಟು ಮಾಡಿದೆ. ಹೀಗಾಗಿ ಬ್ರಿಟನ್ ಸರ್ಕಾರವು ಒಟ್ಟು 100 ಮಿಲಿಯನ್ ಕೊರೊನಾ ಲಸಿಕೆ ಒದಗಿಸುವಂತೆ ಅಸ್ಟ್ರಾಜೆನೆಕಾ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ.
PublicNext
30/12/2020 02:34 pm