ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವದಲ್ಲಿ ಡೆಡ್ಲಿ ಸೋಂಕಿನಿಂದ 2.61 ಕೋಟಿಗೂ ಅಧಿಕ ಮಂದಿ ಗುಣಮುಖ

ವಾಷಿಂಗ್ಟನ್ : ವಿಶ್ವಕ್ಕೆ ಕಂಟಕವಾಗಿರುವ ಡೆಡ್ಲಿ ಸೋಂಕು ಕೊರೊನಾ ಹಾವಳಿ ಇನ್ನೂ ತಗ್ಗಿಲ್ಲ.

ನಿತ್ಯ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಲೇ ಇವೆ.

ಜಗತ್ತಿನಾದ್ಯಂತ 3.51 ಕೋಟಿಗೂ ಅಧಿಕ ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 10.03 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಕೊರೊನಾ ವೈರಸ್ ವರ್ಡೊ ಮೀಟರ್ ತಿಳಿಸಿದೆ.

ಈವರೆಗೆ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 3,51,22,281ಕ್ಕೆ ಮುಟ್ಟಿದ್ದು, 10,37,524 ಮಂದಿ ಮೃತಪಟ್ಟಿದ್ದಾರೆ.

2,61,17,241ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 79,67,516 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ.

ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ 76,00,846 ಜನರಿಗೆ ಕೋವಿಡ್-19 ದೃಢಪಟ್ಟಿದೆ.

ಸದ್ಯ 2,14,277 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 48,18,509 ಜನರು ಈ ವರೆಗೆ ಚೇತರಿಸಿಕೊಂಡಿದ್ದಾರೆ.

ಭಾರತದಲ್ಲಿ 65,47,413 ಬ್ರೆಜಿಲ್ನಲ್ಲಿ 49,06,833, ರಷ್ಯಾದಲ್ಲಿ 12,04,502, ಕೊಲಂಬಿಯಾದಲ್ಲಿ 8,48,147, ಪೆರುವಿನಲ್ಲಿ 8,24,985, ಚಿಲಿಯಲ್ಲಿ 4,68,471, ಇರಾನ್ನಲ್ಲಿ 4,68,119, ಇಂಗ್ಲೆಂಡ್ನಲ್ಲಿ 4,80,017, ಸ್ಪೇನ್ನಲ್ಲಿ 7,78,607 ಮತ್ತು ದಕ್ಷಿಣ ಆಫ್ರಿಕಾದಲ್ಲಿ 6,79,716 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

Edited By : Nirmala Aralikatti
PublicNext

PublicNext

04/10/2020 08:24 am

Cinque Terre

74.58 K

Cinque Terre

0