ಗಾಂಧಿನಗರ: ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೆ ಇದನ್ನು ಗಾಳಿಗೆ ತೂರುತ್ತಿರುವ ಜನರಿಗೆ ಗುಜರಾತ್ ಹೈಕೋರ್ಟ್ ಬಿಸಿ ಮುಟ್ಟಿಸಿದೆ.
ವಿಶಾಲ್ ಅವ್ತಾನಿ ಹೂಡಿದ್ದ ದಾವೆಯನ್ನು ಬುಧವಾರ ಕೈಗೆತ್ತಿಕೊಂಡ ಗುಜರಾತ್ ಹೈಕೋರ್ಟ್, ಮಾಸ್ಕ್ ಧರಿಸುವುದಕ್ಕೆ ನಿರಾಕರಿಸುವವರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ಕರೆದೊಯ್ದು ಸಮುದಾಯ ಸೇವೆ ಮಾಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಜೊತೆಗೆ ಈ ಸಂಬಂಧ ನಿಯಮ ರೂಪಿಸಿ ಡಿಸೆಂಬರ್ 24ರೊಳಗೆ ವರದಿ ಸಲ್ಲಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ.
ವರದಿಗಳ ಪ್ರಕಾರ ಮಾಸ್ಕ್ ಧರಿಸದವರಿಗೆ ಹಾಗೂ ಕೊರೊನಾ ನಿಯಮ ಉಲ್ಲಂಘಿಸುವವರೆಗೆ ದಂಡ ವಿಧಿಸುವುದರ ಜೊತೆಗೆ ಹೆಚ್ಚುವರಿಯಾಗಿ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಕನಿಷ್ಠ 4ರಿಂದ 5 ಗಂಟೆ ಅವಧಿಗೆ ಕನಿಷ್ಠ 5ರಿಂದ ಗರಿಷ್ಠ 15 ದಿನಗಳ ಕಾಲ ಸಮುದಾಯ ಸೇವೆ ಮಾಡಲಾಗುತ್ತದೆ. ಅಲ್ಲಿ ಅವರು ಸ್ವಚ್ಛತಾ ಕಾರ್ಯ, ಹೌಸ್ಕೀಪಿಂಗ್, ಅಡುಗೆ, ನೆರವು, ಸೋಂಕುಪೀಡಿತರ ಸೇವೆ, ರೆಕಾರ್ಡ್, ಡೇಟಾ ಸಂಗ್ರಹ ಮುಂತಾದ ಕೆಲಸಗಳನ್ನು ಕೊಡಬೇಕಾಗುತ್ತದೆ.
PublicNext
02/12/2020 03:26 pm