ಕ್ಯಾನ್ಸರ್ ಒಂದು ಮಾರಣಾಂತಿಕ ರೋಗ ಈ ರೋಗಕ್ಕೆ ಚಿಕಿತ್ಸೆ ನೀಡಬಹುದಾಗಿತ್ತೆ ಹೊರತು ಸಂಪೂರ್ಣ ಗುಣಪಡಿಸುವ ಔಷಧಿ ಇರಲಿಲ್ಲ. ಆದರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕ್ಯಾನ್ಸರ್ ಗುಣಪಡಿಸುವ ಔಷಧಿವೊಂದನ್ನು ಕಂಡು ಹಿಡಿಯಲಾಗಿದೆ. ಈ ಔಷಧಿ ಬಳಸಿದ ರೋಗಿಗಳು ಗುಣವಾಗಿರುವ ಉದಾಹರಣೆಯೂ ಕಣ್ಣ ಮುಂದೆ ಇದೆ.
ಹೌದು ಗುದನಾಳದ ಕ್ಯಾನ್ಸರ್ ಹೊಂದಿರುವ ಜನರ ಒಂದು ಸಣ್ಣ ಗುಂಪನ್ನುಕ್ಯಾನ್ಸರ್ ಪ್ರಾಯೋಗಿಕ ಪರೀಕ್ಷೆಗೊಳಪಡಿಸಿದ್ದು ಅವರೆಲ್ಲರೂ ರೋಗಮುಕ್ತರಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.ಪತ್ರಿಕೆಯ ವರದಿ ಪ್ರಕಾರ ಒಂದು ಚಿಕ್ಕ ಕ್ಲಿನಿಕಲ್ ಪ್ರಯೋಗದಲ್ಲಿ, 18 ರೋಗಿಗಳು ಸುಮಾರು ಆರು ತಿಂಗಳ ಕಾಲ ದೋಸ್ಟಾರ್ಲಿಮಾಬ್ ಎಂಬ ಔಷಧಿಯನ್ನು ನೀಡಲಾಗಿತ್ತು.
ಹೀಗೆ ಔಷಧಿ ತೆಗೆದುಕೊಂಡವರಲ್ಲಿ ಕ್ಯಾನ್ಸರ್ ಗೆಡ್ಡೆಗಳು ಕಣ್ಮರೆಯಾಗಿವೆಯಂತೆ. ದೋಸ್ಟಾರ್ಲಿಮಾಬ್ ಎಂಬುದು ಪ್ರಯೋಗಾಲಯ-ಉತ್ಪಾದಿತ ಅಣುಗಳನ್ನು ಹೊಂದಿರುವ ಔಷಧವಾಗಿದ್ದು ಅದು ಮಾನವ ದೇಹದಲ್ಲಿ ಬದಲಿ ಪ್ರತಿಕಾಯಗಳಾಗಿ ಕಾರ್ಯನಿರ್ವಹಿಸುತ್ತದೆ. ಗುದನಾಳದ ಕ್ಯಾನ್ಸರ್ ಇರುವ ಎಲ್ಲ 18 ರೋಗಿಗಳಿಗೆ ಒಂದೇ ಔಷಧವನ್ನು ನೀಡಲಾಯಿತು. ಚಿಕಿತ್ಸೆಯ ಪರಿಣಾಮವಾಗಿ, ಪ್ರತಿ ರೋಗಿಯಲ್ಲಿ ಕ್ಯಾನ್ಸರ್ ಸಂಪೂರ್ಣವಾಗಿ ಮಾಯವಾಗಿದೆ.
ಇದನ್ನುದೈಹಿಕ ಪರೀಕ್ಷೆಯಿಂದ ಕಂಡುಹಿಡಿಯಲಾಗುವುದಿಲ್ಲ. ಅದಕ್ಕಾಗಿ ಎಂಡೋಸ್ಕೋಪಿ, ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ ಅಥವಾ ಪಿಇಟಿ ಸ್ಕ್ಯಾನ್ಗಳು ಅಥವಾ ಎಂಆರ್ ಐ ಸ್ಕ್ಯಾನ್ ಗಳನ್ನು ಮಾಡಬೇಕು.ನ್ಯೂಯಾರ್ಕ್ನ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ನ ಡಾ ಲೂಯಿಸ್ ಎ. ಡಯಾಜ್ ಜೆ. ಇದು “ಕ್ಯಾನ್ಸರ್ ಇತಿಹಾಸದಲ್ಲಿ ಇದು ಮೊದಲ ಬಾರಿಗೆ ಸಂಭವಿಸಿದೆ” ಎಂದು ಹೇಳಿದ್ದಾರೆ.
PublicNext
08/06/2022 01:58 pm