ನವದೆಹಲಿ : ಕೊರೊನಾ ಸೋಂಕಿಗೀಡಾಗಿದ್ದ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಿ ನಿನ್ನೆ ಬುಧವಾರ ದೆಹಲಿಯ ಎಲ್ ಎನ್ ಜೆಪಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
48 ವರ್ಷದ ಮನೀಶ್ ಸಿಸೋಡಿಯಾಗೆ ಕಳೆದ ವಾರ ಕೊರೊನಾ ವರದಿ ಪಾಸಿಟಿವ್ ಎಂದು ಬಂದಿತ್ತು.
ಈ ಹಿನ್ನೆಲೆ ಅವರು ತಮ್ಮ ನಿವಾಸಲ್ಲಿಯೇ ಕ್ವಾರಂಟೀನ್ ಗೆ ಒಳಗಾಗಿದ್ದರು.
ತೀವ್ರ ಜ್ವರ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
PublicNext
24/09/2020 08:39 am