ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೊರೊನಾ ಜತೆ ಡೆಂಘಿ ಹೆಚ್ಚಳ

ಬೆಂಗಳೂರು:ರಾಜ್ಯಾದ್ಯಂತ ಕೊವೀಡ್ ಸೋಂಕು ಹೆಚ್ಚಳವಾಗ್ತಿರುವ ಬೆನ್ನಲ್ಲೇ ಡೆಂಘಿ ಪ್ರಕರಣಗಳು ಕೂಡಾ ಏರಿಕೆಯಾಗುತ್ತಿದೆ.

ಈ ವರ್ಷದ ಆರಂಭದಿಂದ ಜೂನ್ 10 ವರೆಗೆ ರಾಜ್ಯದಲ್ಲಿ 1838 ಪ್ರಕರಣಗಳು ವರದಿಯಾಗಿದೆ. ರಾಜ್ಯ ಆರೋಗ್ಯ ಇಲಾಖೆಯ ಅಂಕಿ - ಅಂಶಗಳ ಪ್ರಕಾರ , ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದ್ರೆ , ಈ ವರ್ಷ 50% ಪ್ರಕರಣಗಳು ಏರಿಕೆ ಕಂಡಿವೆ. ಡೆಂಘಿ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಇನ್ನೂ ಮುಂಗಾರು ಋತುವಿನಲ್ಲಿ ಡೆಂಘಿ, ಚಿಕನ್ ಗುನ್ಯಾ, ಝೀಕಾ ವೈರಸ್ ರೋಗಕ್ಕೆ ಕಾರಣವಾಗಿರುವ ಈಡಿಸ್ ಸೊಳ್ಳೆ ಸಂತಾನೋತ್ಪತ್ತಿ ತಗ್ಗಿಸುವ ನಿಟ್ಟಿನಲ್ಲಿ ವಹಿಸಬೇಕಾದ ಕ್ರಮಗಳ ಬಗ್ಗೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರಿಗೆ ಪ್ರತಿ ನಿತ್ಯ ಜಾಗೃತಿ ಮೂಡಿಸಲು ಸೂಚಿಸಲಾಗಿದೆ.

ಇನ್ನೂ ಕೊವೀಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರ್ತಾಯಿದೆ. ಜ್ವರ ,ತಲೆನೋವು, ಅತಿಯಾದ ಸುಸ್ತು, ಇತ್ಯಾದಿಗಳು ಬರೋಗ ಲಕ್ಷಣ ಕಂಡು ಬರ್ತಿದೆ. ಹೀಗಾಗಿ ಎಚ್ಚರಿಕೆ ಜನರು ಇರೋದು ಒಳಿತು.

Edited By : Somashekar
PublicNext

PublicNext

13/06/2022 03:59 pm

Cinque Terre

45.53 K

Cinque Terre

0

ಸಂಬಂಧಿತ ಸುದ್ದಿ