ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದಲ್ಲಿ ಓಮಿಕ್ರಾನ್ ಬಿಎ.4, ಬಿಎ.5 ಉಪ-ತಳಿ ಪ್ರಕರಣ ಪತ್ತೆ!

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್‌ನ ಬಿಎ.4 ಮತ್ತು ಬಿಎ.5 ಓಮಿಕ್ರಾನ್ ಉಪ-ತಳಿ ಪತ್ತೆಯಾಗಿರುವುದನ್ನು ಭಾರತೀಯ SARS-CoV-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG) ದೃಢಪಡಿಸಿದೆ.

ತಮಿಳುನಾಡಿನ 19 ವರ್ಷದ ಯುವತಿಯು ಓಮಿಕ್ರಾನ್ನ BA.4 ಉಪ-ತಳಿಯ ಸೋಂಕಿಗೆ ಒಳಗಾಗಿದ್ದಾರೆ. ಅವರಿಗೆ ಸೌಮ್ಯವಾದ ರೋಗ ಲಕ್ಷಣಗಳು ಕಂಡುಬಂದಿದೆ. ಅವರು ಸಂಪೂರ್ಣವಾಗಿ ಕೊರೊನಾ ಲಸಿಕೆಯನ್ನು ಪಡೆದಿದ್ದಾರೆ. ಆಕೆಗೆ ಪ್ರಯಾಣದ ಇತಿಹಾಸ ತಿಳಿದು ಬಂದಿಲ್ಲ.

ಇದಕ್ಕೂ ಮೊದಲು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ದಕ್ಷಿಣ ಆಫ್ರಿಕಾದ ಪ್ರಜೆಯೊಬ್ಬರಿಗೆ ಓಮಿಕ್ರಾನ್‌ನ BA.4 ಉಪ-ತಳಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಮತ್ತೊಂದು ಪ್ರಕರಣದಲ್ಲಿ ತೆಲಂಗಾಣದಲ್ಲಿ 80 ವರ್ಷದ ವ್ಯಕ್ತಿಯೊಬ್ಬರಿಗೆ ಓಮಿಕ್ರಾನ್‌ನ ಬಿಎ.5 ಉಪ-ತಳಿಯ ಸೋಂಕು ತಗುಲಿದೆ. ಅವರು ಸೌಮ್ಯವಾದ ರೋಗ ಲಕ್ಷಣಗಳನ್ನು ಹೊಂದಿದ್ದಾರೆ.

Edited By : Vijay Kumar
PublicNext

PublicNext

23/05/2022 10:12 am

Cinque Terre

71.36 K

Cinque Terre

3

ಸಂಬಂಧಿತ ಸುದ್ದಿ