ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಬೂಸ್ಟರ್ ಡೋಸ್ ಸಿಗ್ತಾನೇ ಇಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬೂಸ್ಟರ್ ಡೋಸ್ ಅಭಾವ ಅತಿ ಹೆಚ್ಚು ಇದೆ.
ನಾಲ್ಕನೆ ಅಲೆ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೂ ಈ ಬಗ್ಗೆ ಎಚ್ಚರದಿಂದರಲು ಹೇಳಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳಲು ಸರ್ಕಾರ ಮುಂದಾಗಿ ಅಂತಲೂ ಆರೋಗ್ಯ ಸಚಿವ ಸುಧಾಕರ್ ಹೇಳಿಕೊಟ್ಟಿದ್ದಾರೆ.
ಆದರೆ, ಇಲ್ಲಿಯ ಸರ್ಕಾರಿ ಹಾಗೂ ಬಿಬಿಎಂಪಿ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ ಸಿಗ್ತಾನೇ ಇಲ್ಲ. ಹೀಗಾಗಿಯೇ ಜನರಲ್ಲಿ ನಾಲ್ಕನೆ ಅಲೆಯ ಭೀತಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
PublicNext
28/04/2022 11:31 am