ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದಲ್ಲಿ ಕೋವಿಡ್ 4ನೇ ಅಲೆ ಆತಂಕ; 2000 ಗಡಿ ದಾಟಿದ ಕೇಸ್ !

ನವದೆಹಲಿ: ಭಾರತದಲ್ಲಿ ಕೋವಿಡ್ ನಾಲ್ಕನೆ ಅಲೆ ಶುರು ಆಗಿಯೇ ಬಿಡ್ತಾ ? ಗೊತ್ತಿಲ್ಲ. ಆದರೆ, ಈಗೀನ ಸ್ಥಿತಿ ನೋಡಿದ್ರೆ, ಜನರಲ್ಲಿ ಮೂಡಿದ ಆತಂಕ ನಿಜ ಅಂತಲೇ ಅನಿಸುತ್ತಿದೆ. ಮೊನ್ನೆ ನಿನ್ನೆ ಕೋವಿಡ್ ಕೇಸ್ ಲೆಕ್ಕದಲ್ಲಿ ಹೆಚ್ಚಳವೇ ಕಂಡು ಬರುತ್ತಿದೆ. ಒಟ್ಟು ಭಾರತ ಅಂತ ತೆಗೆದುಕೊಂಡ್ರೆ, ಈಗ ಸೋಂಕಿತರ ಸಂಖ್ಯೆ 2000 ಗಡಿ ದಾಟಿದೆ.

ಕೇವಲ ಒಂದೇ ದಿನದಲ್ಲಿ 2,527 ಮಂದಿಗೆ ಕೊರೊನಾ ವೈರಸ್ ತಗುಲಿರೋದು ವೈದ್ಯಕೀಯ ಪರೀಕ್ಷೆಯಿಂದಲೇ ತಿಳಿದು ಬಂದಿದೆ. ಶನಿವಾರ ಒಂದೇ ದಿನವೇ 33 ಜನ ಮೃತಪಟ್ಟಿದ್ದಾರೆ. 1,656 ಜನ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕೊರೊನಾ ರೂಪಾಂತರಿ ಅಲೆಯ ನಡುವೇನೆ ಪಾಸಿಟಿವಿಟ ರೇಟ್ ಕೂಡ ಜಂಪ್ ಆಗಿದ್ದು,ಶೇಕಡ 0.56 ರಷ್ಟು ಏರಿಕೆ ಕಂಡಿದೆ. ಒಮಿಕ್ರಾನ್ ರೂಪಾಂತರಿ ExE ತಳಿಯ ಆತಂಕವೂ ಈ ನಡುವೆ ಹೆಚ್ಚಾಗುತ್ತಿದೆ.

Edited By :
PublicNext

PublicNext

23/04/2022 12:18 pm

Cinque Terre

32.67 K

Cinque Terre

0