ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್ಲಾ‌ ಕಡೆ ಬೇಕಾಬಿಟ್ಟಿ ಓಡಾಡಿದ್ದೇ ಕೊರೊನಾ ಹೆಚ್ಚಳಕ್ಕೆ ಕಾರಣ: ಸಂಖ್ಯೆ ನೋಡಿದ್ರೆ ಮೈಜುಮ್ಮೆನ್ನುತ್ತೆ ಎಂದ ಡಿಸಿ...!

ದಾವಣಗೆರೆ: ಹಬ್ಬ, ಮದುವೆ, ಜಾತ್ರೆ, ತೇರು ಅಂತಾ ಜನರು ಬೇಕಾಬಿಟ್ಟಿಯಾಗಿ ಓಡಾಡಿದ್ದೇ ಕೊರೊನಾ ಹೆಚ್ಚಳಕ್ಕೆ ಕಾರಣ. ದಿನಕ್ಕೆ 400 ಪಾಸಿಟಿವ್ ಕೇಸ್ ಬರುತ್ತಿದ್ದು, ನೋಡಿದ್ರೆ ಮೈಜುಮ್ಮೆನ್ನುತ್ತೆ. ಈಗಲಾದರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅದ್ಧೂರಿಯಾಗಿ ಲಗ್ನ ಮಾಡಬೇಡಿ. ಸಾಧ್ಯವಾದ್ರೆ ಮುಂದೂಡಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮನವಿ ಮಾಡಿದ್ದಾರೆ.

ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಅವರು, ಸಣ್ಣ ಸಣ್ಣ ಮಕ್ಕಳಿಗೂ ಕೊರೊನಾ ವೈರಸ್ ತಗುಲಿರುವುದು ಖಚಿತಪಟ್ಟಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಜನರು ಎಲ್ಲೆಂದರಲ್ಲಿ ವಿನಾ ಕಾರಣ ತಿರುಗಾಟ ಮಾಡಿದ್ದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಜಾಸ್ತಿ ಆಗಲು ಕಾರಣ ಎಂದು ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ದಿನ ಕಳೆದಂತೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಜಾತ್ರೆ, ಮದುವೆ, ತೇರು ಎಳೆದು, ಎಲ್ಲಾ ಕಡೆ ಜನರು ಬೇಕಾಬಿಟ್ಟಿಯಾಗಿ ಅಡ್ಡಾಡಿದ ಪರಿಣಾಮ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟುವಂತೆ ಆಗಿದೆ. ಇದರಲ್ಲಿ ಜನರ ನಿರ್ಲಕ್ಷ್ಯವೇ ಹೆಚ್ಚಾಗಿದೆ. ಕೊರೊನಾ ಹೆಚ್ಚಳಕ್ಕೆ ಜನರ ಬೇಜವಾಬ್ದಾರಿಯೇ ಕಾರಣ ಎಂದು ವಿಶ್ಲೇಷಿಸಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿಗಳು, 1 ರಿಂದ 5 ವರ್ಷದೊಳಗಿನ ಮಕ್ಕಳಿಗೂ ಕೊರೊನಾ ಸೋಂಕು ವಕ್ಕರಿಸಿದೆ. ಪೋಷಕರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬೇಡಿ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ. ಸೋಂಕು ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದರು.

Edited By : Shivu K
PublicNext

PublicNext

20/01/2022 02:21 pm

Cinque Terre

116.39 K

Cinque Terre

8

ಸಂಬಂಧಿತ ಸುದ್ದಿ