ಬಾಗಲಕೋಟೆ: ನಗರದ ಪ್ರಸಿದ್ಧ ಊರ ಹಬ್ಬ ಬನಶಂಕರಿ ಜಾತ್ರೆಗಾಗಿ ಸಾವಿರಾರು ಭಕ್ತರು ಇಳಕಲ್ ನಗರದಿಂದ ಬಾದಾಮಿಯ ಬನಶಂಕರಿ ವರೆಗೆ ಪಾದಯಾತ್ರೆ ಹೊರಟಿದ್ದಾರೆ. ಮಕ್ಕಳಿಂದ ವೃದ್ದರವರೆಗೂ ಸಾಗರೋಪಾದಿಯಲ್ಲಿ ಹರಿದು ಬಂದ ಜನರು ಇಳಕಲ್ ನಗರದಿಂದ ಹೂಲಗೇರಿ, ಬಂಡರಗಲ್, ಕಾಟಾಪೂರ, ದಮ್ಮೂರು, ಗುಡೂರು, ಪಟ್ಟದಕಲ್, ಶಿವಯೋಗ ಮಂದಿರ, ಬನಶಂಕರಿ ವರೆಗೂ ಪಾದಯಾತ್ರೆ ಮಾಡಿದ್ದಾರೆ.
ಇಳಕಲ್ ಮಾತ್ರವಲ್ಲದೇ ಪಕ್ಕದ ರಾಯಚೂರು, ಕೊಪ್ಪಳ ಜಿಲ್ಲೆಯಿಂದಲೂ ಭಕ್ತರು ಬಂದಿದ್ದು, ಇಂದು ನಸುಕಿನ ಜಾವದಿಂದ ಪಾದಯಾತ್ರೆ ಹೊರಟಿದ್ದಾರೆ. ಮಾರ್ಗ ಮಧ್ಯ ಅಲ್ಲಲ್ಲಿ ಭಕ್ತರಿಂದ ಪಾದಯಾತ್ರಿಗಳಿಗೆ ಉಚಿತ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿದೆ. ಅಂದಾಜು 50 ರಿಂದ 55 ಕಿ.ಮೀ.ಪಾದಯಾತ್ರೆ ಮೂಲಕ ಬನಶಂಕರಿ ಜಾತ್ರೆಗೆ ತೆರಳಿದ್ದಾರೆ. ಜ. 17 ರಂದು ಬನದ ಹುಣ್ಣಿಮೆ ದಿನ ನಡೆಯುವ ಬನಶಂಕರಿ ಜಾತ್ರೆ ಒಂದು ತಿಂಗಳು ಕಾಲ ನಡೆಯುತ್ತದೆ.ಲಕ್ಷಾಂತರ ಜನರು ಸೇರುವ ಕಾರಣಕ್ಕೆ ಜಾತ್ರೆ ರದ್ದು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ ಆದರೂ ಸಾವಿರಾರು ಭಕ್ತರು ಜಾತ್ರೆಗೆ ಪ್ರತಿವರ್ಷದಂತೆ ಹೊರಟಿದ್ದಾರೆ.
ಕೊರೋನಾ ನಿಯಮಾವಳಿ, ವೀಕೆಂಡ್ ಕರ್ಫ್ಯೂ ಯಾವುದಕ್ಕೂ ಡೋಂಟ್ ಕೇರ್ ಅನ್ನದೇ ಜಾತ್ರೆಯ ಸಂಭ್ರಮದಲ್ಲಿದ್ದಾರೆ ಊರಮಂದಿ.
PublicNext
15/01/2022 01:22 pm