ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾಗೂ ಒಮಿಕ್ರಾನ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಅದರಲ್ಲೂ ರಾಜ್ಯ ರಾಜಧಾನಿಯಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಆತಂಕ ಹೆಚ್ಚಾಗಿದೆ.
ಶಾಕಿಂಗ್ ಸಂಗತಿ ಎಂದರೆ ಐಟಿ-ಬಿಟಿ ಹಬ್‌ಗಳಲ್ಲಿ ಶೇ. 50 ರಷ್ಟು ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದೆ. 8 ವಲಯಗಳ ಪೈಕಿ ಒಂದೇ ವಾರದಲ್ಲಿ 27 ಸಾವಿರಕ್ಕೂ ಅಧಿಕ ಕೇಸ್ ಪತ್ತೆಯಾಗಿದೆ.
ಮಹದೇವಪುರ, ಬೊಮ್ಮನಹಳ್ಳಿ, ಪೂರ್ವವಲಯದಲ್ಲೇ ಹೆಚ್ಚು ಸೋಂಕು ಕಂಡು ಬಂದಿದೆ. ಹೊರದೇಶ, ಅಂತರ್ ರಾಜ್ಯ ಪ್ರಯಾಣಿಕರೇ ಇರುವ ಪ್ರದೇಶವಿದು. ಇದೇ ಕಾರಣಕ್ಕೆ ಈ ಭಾಗದಲ್ಲಿ ಸೋಂಕು ಹೆಚ್ಚಳವಾಗುತ್ತಿದೆ.
PublicNext
14/01/2022 05:58 pm