ನವದೆಹಲಿ: ದೇಶದಾದ್ಯಂತ ಕೊರೊನಾ ಆರ್ಭಟ ಜೋರಾಗಿದೆ. 24 ಗಂಟೆಗಳ ಅಂತರದಲ್ಲಿ ದೇಶದ 1,68,063 ಜನರಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿದೆ. ಇದೇ ಅವಧಿಯಲ್ಲಿ ಸೋಂಕಿನಿಂದ 277 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಪ್ರಸ್ತುತ ದೇಶದಲ್ಲಿ 8,21,446 ಸಕ್ರಿಯ ಪ್ರಕರಣಗಳಿವೆ ಹಾಗೂ ಕೋವಿಡ್ ಪಾಸಿಟಿವಿಟಿ ದರವು 10.64ರಷ್ಟಿದೆ. 24 ಗಂಟೆಗಳ ಅಂತರದಲ್ಲಿ 69,959 ಮಂದಿ ಚೇತರಿಸಿಕೊಂಡಿದ್ದಾರೆ. ಸೋಮವಾರ ಕೋವಿಡ್ ದೃಢಪಟ್ಟ 1,79,723 ಪ್ರಕರಣಗಳು ವರದಿಯಾಗಿದ್ದವು.
ಒಟ್ಟು 3.58 ಕೋಟಿಗೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಒಮಿಕ್ರಾನ್ ದೃಢ ಪ್ರಕರಣಗಳ ಸಂಖ್ಯೆ 4,461ಕ್ಕೆ ಏರಿಕೆಯಾಗಿದೆ. ಈವರೆಗೂ ಸೋಂಕಿನಿಂದ 4,84,213 ಮಂದಿ ಮೃತಪಟ್ಟಿದ್ದಾರೆ.
PublicNext
11/01/2022 11:48 am