ನವದೆಹಲಿ: ಈಗಾಗಲೇ ಸುಧಾರಿಕೊಳ್ಳಲಾಗದ ಹಂತ ತಲುಪಿಸಿರುವ ಹೆಮ್ಮಾರಿ ಸೋಂಕು ಕೊರೊನಾ ಮತ್ತೆ ತನ್ನ ಅಟ್ಟಹಾಸ ಶುರುಮಾಡಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 90 ಸಾವಿರದ 928 ಹೊಸ ಕೇಸುಗಳು ವರದಿಯಾಗಿದ್ದು 325 ಮಂದಿ ಮೃತಪಟ್ಟಿದ್ದಾರೆ.
ನ್ಯೂ ಇಯರ್ ಬಳಿಕ ದೇಶದಲ್ಲಿ ಕೋವಿಡ್ ಕೇಸ್ ಗಳ ಸಂಖ್ಯೆ ಕಂಡರಿಯದ ರೀತಿಯಲ್ಲಿ ಹೆಚ್ಚುತ್ತಿವೆ. ಸದ್ಯ ಒಟ್ಟು ಸಕ್ರಿಯ ಕೋವಿಡ್ ಸೋಂಕಿತರ ಸಂಖ್ಯೆ 2,85,401ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 19 ಸಾವಿರದ 206 ಮಂದಿ ಗುಣಮುಖರಾಗುವುದರೊಂದಿಗೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,43,41,009ಕ್ಕೆ ತಲುಪಿದೆ.
ದೇಶದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 4 ಲಕ್ಷದ 82 ಸಾವಿರದ 876ಕ್ಕೆ ಏರಿಕೆಯಾಗಿದೆ. ಗುಣಮುಖ ಹೊಂದುತ್ತಿರುವವರ ಪ್ರಮಾಣ ಶೇಕಡಾ 97.81ರಷ್ಟಾಗಿದೆ. ಈವರೆಗೂ 68.53 ಕೋಟಿ ಜನರನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿದೆ.
ಒಮಿಕ್ರಾನ್ ಸೋಂಕಿತರು: ಕರ್ನಾಟಕದಲ್ಲಿ 226 ಹೊಸ ಒಮಿಕ್ರಾನ್ ಸೋಂಕಿತರು ಕಳೆದ 24 ಗಂಟೆಗಳಲ್ಲಿ ಪತ್ತೆಯಾಗಿದ್ದು, 25 ಮಂದಿ ಗುಣಮುಖರಾಗಿದ್ದಾರೆ. ಮಹಾರಷ್ಟ್ರದಲ್ಲಿ ಅತಿಹೆಚ್ಚು 797 ಪ್ರಕರಣ ವರದಿಯಾಗಿದ್ದು, ನಂತರದ ಸ್ಥಾನದಲ್ಲಿ ದೆಹಲಿ 465 ಕೇಸುಗಳು ವರದಿಯಾಗಿವೆ. ಒಟ್ಟಾರೆ ದೇಶದಲ್ಲಿ 2,630 ಸೋಂಕಿತರಿದ್ದಾರೆ.
PublicNext
06/01/2022 10:39 am