ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಸಿಎಂ ಬದಲಾವಣೆ, ಸಚಿವರ ಕೈಬಿಡುವುದು ಗಾಳಿಸುದ್ದಿ- ಆರಗ ಜ್ಞಾನೇಂದ್ರ

ಚಿಕ್ಕಮಗಳೂರು: ಜನ ಸಹಕಾರ ಕೊಡದಿದ್ದರೆ ಲಾಕ್ ಡೌನ್ ಅನಿವಾರ್ಯ ಜನರ ಜೀವ ಉಳಿಸುವುದು ಸರ್ಕಾರದ ಬದ್ಧತೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ಜನ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು. ಕಾಂಗ್ರೆಸ್ ಪಕ್ಷದಿಂದ ನಡೆಯುತ್ತಿರುವ ಪಾದಯಾತ್ರೆಗೆ ಬೇಸರ ಇದೆ.

ಪಾದಯಾತ್ರೆಗೆ ಅನುಮತಿ ಕೊಡುವುದು ಬಿಡುವುದು ಬೇರೆ ಕೋವಿಡ್ ಸಮಯದಲ್ಲಿ ರಾಜಕಾರಣದ ನಡೆಯನ್ನ ಮುಂದೂಡುವುದು ಒಳ್ಳೆಯದು ವಿರೋಧ ಪಕ್ಷವಾಗಿ ಹೋರಾಟ ಮಾಡಲು ಅವರಿಗೆ ಅವಕಾಶವಿದೆ ಆದ್ರೆ, ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ಸಿಗರು ಏನು ಮಾಡಲಿಲ್ಲ ಆದರೆ, ಕೋವಿಡ್ ನಿಯಮಗಳನ್ನ ಪಾಲಿಸಬೇಕೆಂದು ಕೋರುತ್ತೇನೆ ಎಂದರು.

ಸಿಎಂ ಬದಲಾವಣೆ, ಸಚಿವರ ಕೈಬಿಡುವುದು ಗಾಳಿಸುದ್ದಿ ಬೊಮ್ಮಾಯಿ ಸರ್ಕಾರದಲ್ಲಿ ಯಾವ ಸಚಿವರನ್ನೂ ಬಿಡುವುದಿಲ್ಲ, ಗೃಹ ಇಲಾಖೆ ತೃಪ್ತಿ ಕೊಟ್ಟಿದೆ, ಚಾಲೆಂಜ್ ಕೂಡ ಆಗಿದೆ ಎಂದಿದ್ದಾರೆ.

Edited By : Manjunath H D
PublicNext

PublicNext

03/01/2022 11:01 am

Cinque Terre

89.4 K

Cinque Terre

3