ಬೆಂಗಳೂರು: ರಾಜಧಾನಿ ಬೆಂಗ ಳೂರಲ್ಲಿ ಮತ್ತೆ 10 ಮಂದಿಗೆ ಕೊರೊನಾ ವೈರಾಣು ರೂಪಾಂತರಿ ಒಮಿಕ್ರಾನ್ ಪತ್ತೆ ಆಗಿದೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ಒಮಿಕ್ರಾನ್ ಸಂಖ್ಯೆ 19ಕ್ಕೆ ಏರಿಕೆ ಕಂಡಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ವಿದೇಶದಿಂದ ಬಂದು ಕೊರೊನಾ ಸೋಂಕಿತರಾದವರು ಹಾಗೂ ಅವರ ನೇರ ಸಂಪರ್ಕದಲ್ಲಿ ಇದ್ದ ವರು ಸ್ಯಾಂಪಲ್ ಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಕಳು ಹಿಸಲಾಗಿದೆ. ಅದರ ವರದಿ ಬಂದಿ ದ್ದು, ವಿದೇಶದಿಂದ ಬಂದವರಲ್ಲಿ 7 ಮಂದಿಗೆ ಹೊಸ ತಳಿಯ ವೈರಾಣು ಪತ್ತೆಯಾಗಿದೆ.
ಬ್ರಿಟನ್ ನಿಂದ ಡಿ.೧೨ ಕ್ಕೆ ಬೆಂಗಳೂರು ಬಂದ ಯುವತಿಗೆ ಒಮಿಕ್ರಾನ್ ಪತ್ತೆಯಾಗಿದ್ದು, ಕೋರಮಂಗಲ್ಲಿ ನೆಲಸಿದ್ದಾರೆ. ಇವರ ಸಂಪರ್ಕದಲ್ಲಿ ಇದ್ದ ಅವರ ಕುಟುಂಬದ ಮೂವರಿಗು ಒಮಿಕ್ರಾನ್ ಸೋಂಕಿತರಾಗಿದ್ದು, ತಂದೆ, ತಾಯಿ ಹಾಗೂ ಸಹೋದರಿ ಒಮಿಕ್ರಾನ್ ಪತ್ತೆಯಾಗಿದೆ.
ಬ್ರಿಟನ್ ನಿಂದ ಬಂದ ಮೂವರು, ಡೆನ್ಮಾರ್ಕ್ ಒರ್ವ, ನೈಜೀರಿಯಾ, ಘಾನಾ, ಒರ್ವ ವ್ಯಕ್ತಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ಈ ಮೂಲಕ ನಗರದಲ್ಲಿ ಸೋಂಕಿತರ ಸಂಖ್ಯೆ 19 ಕ್ಕೆ ಏರಿಕೆ ಆಗಿದೆ.
PublicNext
24/12/2021 11:02 am