ಬೆಂಗಳೂರು : ಕರ್ನಾಟಕದಲ್ಲಿಂದು 12 ಜನರಲ್ಲಿ ಒಮಿಕ್ರಾನ್ ಸೋಂಕು ದೃಢ ಪಟ್ಟಿದೆ ಎಂದು ಆರೋಗ್ಯ ಸಚಿವ ಸುಧಾಕರ ಟ್ವೀಟ್ ರಲ್ಲಿ ಮಾಹಿತಿ ನೀಡಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 31 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿಯೇ ಇಂದು 10 ಒಮಿಕ್ರಾನ್ ಸೋಂಕಿತರು ಪತ್ತೆಯಾಗಿದ್ದಾರೆ. ಬೆಂಗಳೂರಿನಲ್ಲಿ 20 ವರ್ಷದ ಯುವತಿ, 56 ವರ್ಷದ ವ್ಯಕ್ತಿ, 54 ವರ್ಷದ ಮಹಿಳೆಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಇನ್ನುಳಿದಂತೆ ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ 31 ವರ್ಷದ ಪುರುಷ, 42 ವರ್ಷದ ಪುರುಷ, 21 ವರ್ಷದ ಯುವಕ, 18 ವರ್ಷದ ಯುವತಿ, 11 ವರ್ಷದ ಬಾಲಕಿ ಇನ್ನು ನೈಜಿರಿಯಾದಿಂದ ಬಂದಿದ್ದ 59 ವರ್ಷದ ಮಹಿಳೆ ಹಾಗೂ ಡೆನ್ಮಾರ್ಕ್ ನಿಂದ ಬಂದಿದ್ದ 49 ವರ್ಷದ ಮಹಿಳೆಗೆ ಓಮಿಕ್ರಾನ್ ಸೋಂಕು ತಗುಲಿದೆ.
ಗಾನಾದಿಂದ ಮಂಗಳೂರಿಗೆ ಆಗಮಿಸಿರುವ 27 ವರ್ಷ ಯುವಕ ಹಾಗೂ ಸ್ವಿಜರ್ಲ್ಯಾಂಡ್ ನಿಂದ ಮೈಸೂರಿಗೆ ಆಗಮಿಸಿದ್ದ 9 ವರ್ಷದ ಬಾಲಕಿಗೆ ಓಮಿಕ್ರಾನ್ ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೂ 31 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.
PublicNext
23/12/2021 04:02 pm