ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಜಿಮ್ಸ್ ಆಸ್ಪತ್ರೆ ಅಂಗಳದಲ್ಲೇ ತಲೆ ಎತ್ತಿದ ಅತ್ಯಾಧುನಿಕ ಆಸ್ಪತ್ರೆ

ಗದಗ: ಒಮಿಕ್ರಾನ್ ಎದುರಿಸಲು ನಗರದಲ್ಲಿ ರೆಡಿಯಾಗಿದೆ ಮಾಡ್ಯುಲರ್ ಹಾಸ್ಪಿಟಲ್. ಹೌದು ಸಂಭವನೀಯ ಮೂರನೇ ಅಲೆ ಎದುರಿಸಲು ಉತ್ತರ ಕರ್ನಾಟಕದಲ್ಲೇ ಮೊದಲ ಮಾಡ್ಯುಲರ್ ಹಾಸ್ಪಿಟಲ್ ಸಿದ್ಧಗೊಂಡಿದೆ.

ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ನೂರು ಬೆಡ್ ನ ವ್ಯವಸ್ಥೆ ಇದೆ.ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಈ ಆಸ್ಪತ್ರೆ‌ ಸಿದ್ಧಪಡಿಸಿದೆ.

ಹತ್ತು ರೆಡಿಮೇಡ್ ಮಾಡ್ಯುಲರ್ ರೂಮ್ ಗಳು ಸಂಪೂರ್ಣ ಹವಾನಿಯಂತ್ರಿತವಾಗಿದೆ, ಆಸ್ಪತ್ರೆಯ ಬಹುತೇಕ ಬೆಡ್ ಗಳಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರತಿ 10 ಬೆಡ್ ಗೆ ಒಬ್ಬ ಸಿಬ್ಬಂದಿ,ತುರ್ತು ಸಂದರ್ಭದಲ್ಲಿ ಬೇರೆಡೆ ಸಾಗಿಸಬಲ್ಲ ವ್ಯವಸ್ಥೆ , 20 ಬೆಡ್ ಗೆ ಒಬ್ಬ ವೈದ್ಯರನ್ನು ಮೀಸಲಿಟ್ಟಿರುವುದು ಈ ಆಸ್ಪತ್ರೆಯ ವಿಶೇಷವಾಗಿದೆ.ಈ ಮೂಲಕ ಸಂಭವನೀಯ ಮೂರನೇ ಅಲೆಯನ್ನ ಸಮರ್ಥವಾಗಿ ಎದುರಿಸಲು ಗದಗ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

Edited By : Shivu K
PublicNext

PublicNext

06/12/2021 12:59 pm

Cinque Terre

57.74 K

Cinque Terre

0

ಸಂಬಂಧಿತ ಸುದ್ದಿ