ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ನವೋದಯ ವಿದ್ಯಾಲಯದಲ್ಲಿ ಕೊರೋನಾ ಮಹಾಸ್ಫೋಟ, ನಾಲ್ಕೇ ದಿನದಲ್ಲಿ 107 ಕೇಸ್ ಪತ್ತೆ

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಿಗೋಡುವಿನ ನವೋದಯಾ ವಿದ್ಯಾಲಯದಲ್ಲಿ ಕೊರೋನಾ ಸ್ಫೋಟಗೊಂಡಿದೆ. ಇಂದು 38 ಕೊರೋನಾ ಪ್ರಕರಣ ಪತ್ತೆಯಾಗಿದ್ದು. ನಾಲ್ಕು ದಿನದಲ್ಲಿ ಒಂದೇ ವಸತಿ ಶಾಲೆಯಲ್ಲಿ 107 ಕೇಸ್ ಗಳು ಪತ್ತೆಯಾಗಿದೆ.

ಇಂದು ಮೂವರು ಶಿಕ್ಷಕರಲ್ಲಿ ಕೂಡ ಕೊರೋನಾ ಸೋಂಕು ದೃಢ ಪಟ್ಟಿದೆ. ನಿನ್ನೆ 69 ಕೇಸ್ ಪತ್ತೆಯಾಗಿತ್ತು. ಇಲ್ಲಿಯವರೆಗೆ 94 ವಿದ್ಯಾರ್ಥಿಗಳು, 13 ಶಿಕ್ಷಕರು ಸೇರಿದಂತೆ 107 ಮಂದಿಯಲ್ಲಿ ಕೊರೋನಾ ದೃಢವಾಗಿದೆ.

ಈ ವಸತಿ ಶಾಲೆಯಲ್ಲಿ ಮೊದಲು ಶಿಕ್ಷಕರಿಗೊಬ್ಬರಿಗೆ ಕೊರೋನಾ ಕಾಣಿಸಿಕೊಂಡಿತ್ತು. ನಂತರ 418 ವಿಧ್ಯಾರ್ಥಿಗಳು, ಸಿಬ್ಬಂದಿ ಗಳ ಸ್ವ್ಯಾಬ್ ಅನ್ನುಆರೋಗ್ಯ ಇಲಾಖೆ ಪಡೆದಿದ್ದರು. 418 ರಲ್ಲಿ 107 ಪಾಸಿಟಿವ್ ಎಂದು ಪತ್ತೆಯಾಗಿದೆ.

ಈಗಾಗಲೇ ಜವಾಹರ್ ನವೋದಯ ವಿದ್ಯಾಲಯವನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ. ಕೊರೋನಾ ಪತ್ತೆಯಾದವರಲ್ಲಿ ಯಾವುದೇ ಲಕ್ಷಣಗಳಿಲ್ಲ ಮತ್ತು ಅವರನ್ನು ವಸತಿ ಶಾಲೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಸ್ಥಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಇನ್ನು ಜನರಲ್ಲಿ ಕೊರೋನಾ ಆತಂಕ ಹೆಚ್ಚಾಗಿದೆ.

Edited By : Shivu K
PublicNext

PublicNext

06/12/2021 11:41 am

Cinque Terre

59.02 K

Cinque Terre

4